ದಕ್ಷಿಣ ಕನ್ನಡದಲ್ಲಿ 5,000 ಶಾಲಾ ಮಕ್ಕಳ ದೃಷ್ಟಿ ದೋಷ ಪತ್ತೆ!

Date:

spot_img

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಮಕ್ಕಳ ದೃಷ್ಟಿ ಸಮಸ್ಯೆ ಗಂಭೀರವಾಗಿದ್ದು, 5,000 ಮಕ್ಕಳಲ್ಲಿ ದೃಷ್ಟಿ ದೋಷ ಪತ್ತೆಯಾಗಿದೆ. ಈ ಪೈಕಿ 4,000ಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡಕ ಧರಿಸುವುದು ಅಗತ್ಯವಾಗಿದೆ. ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲದೆ ಖಾಸಗಿ ಶಾಲೆಗಳ ಮಕ್ಕಳಿಗೂ ಈ ಸಮಸ್ಯೆ ವ್ಯಾಪಕವಾಗಿದೆ.

6 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ದೃಷ್ಟಿ ದೋಷದ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆ. ಕೆಲವರಿಗೆ ಸೌಮ್ಯ ಸಮಸ್ಯೆಯಾದರೆ, ಹಲವರಿಗೆ ತಕ್ಷಣ ಚಿಕಿತ್ಸೆಯ ಅಗತ್ಯವಿದೆ. ದೂರದರ್ಶನ ವೀಕ್ಷಣೆ, ಮೊಬೈಲ್ ಫೋನ್ ಬಳಕೆ ಹೆಚ್ಚಿದಂತೆ ಮಕ್ಕಳ ದೃಷ್ಟಿ ಶಕ್ತಿ ಕುಗ್ಗುತ್ತಿದೆ. ಆಟವಾಡುವ ಮಕ್ಕಳಿಗೂ ಈಗ ಕನ್ನಡಕ ಅನಿವಾರ್ಯವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ಭಾರಿ ತಪಾಸಣೆ:
ಜಿಲ್ಲಾದ್ಯಂತ 1,376 ಶಾಲೆಗಳಲ್ಲಿ ಆರೋಗ್ಯ ಇಲಾಖೆಯು ಕಣ್ಣಿನ ತಪಾಸಣೆ ನಡೆಸಿದ್ದು, 1,45,951 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದೆ.

1,106 ಸರ್ಕಾರಿ ಶಾಲೆಗಳ 1,01,592 ವಿದ್ಯಾರ್ಥಿಗಳು
270 ಅನುದಾನಿತ ಶಾಲೆಗಳ 44,359 ವಿದ್ಯಾರ್ಥಿಗಳು

ಈ ಪರೀಕ್ಷೆಯಲ್ಲಿ 3,738 ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮತ್ತು 660 ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ದೃಷ್ಟಿ ದೋಷ ಪತ್ತೆಯಾಗಿದೆ. ಅವರಲ್ಲಿ ಹೆಚ್ಚಿನವರಿಗೆ ಈಗಾಗಲೇ ಕನ್ನಡಕ ವಿತರಿಸಲಾಗಿದೆ. ಆದರೆ ಖಾಸಗಿ ಶಾಲೆಗಳ ಡೇಟಾ ಇಲ್ಲದೆ, ಅಲ್ಲಿಯ ಮಕ್ಕಳ ಸ್ಥಿತಿ ಇನ್ನೂ ಅಜ್ಞಾತವಾಗಿದೆ.

ಮಕ್ಕಳ ದೃಷ್ಟಿ ರಕ್ಷಣೆಗೆ ಏನು ಮಾಡಬೇಕು?

  • ಮೊಬೈಲ್, ಟಿವಿ ವೀಕ್ಷಣೆಯನ್ನು ನಿಯಂತ್ರಿಸಲು ಪೋಷಕರ ಜವಾಬ್ದಾರಿ
    ಹೆಚ್ಚಾಗಿದೆ.
  • ಮಕ್ಕಳನ್ನು ಬಹುಪಾಲು ಬಾಯಲಿಗೆ ಕಳಿಸಿ ನೈಸರ್ಗಿಕ ಬೆಳಕಿನಲ್ಲಿ ಹೆಚ್ಚು
    ಸಮಯ ಕಳೆಯಲು ಉತ್ತೇಜಿಸಬೇಕು.
  • ಶಾಲೆಗಳಲ್ಲಿ ದೃಷ್ಟಿ ತಪಾಸಣೆ ನಿಯಮಿತವಾಗಿ ನಡೆಯಬೇಕು.

ಇದು ಆರೋಗ್ಯಕರ ಸಮಾಜಕ್ಕೆ ಕಳವಳಕಾರಿ ಬೆಳವಣಿಗೆ. ಸಮಗ್ರ ತಪಾಸಣೆ ಮತ್ತು ಪ್ರತಿರೋಧಕ ಕ್ರಮಗಳ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳ ಮಾಳ ಬಳಿ ಸರಣಿ ಅಪಘಾತ: 3 ಕಾರು ಜಖಂ

ಕಾರ್ಕಳ ಮಾಳ ಚೆಕ್ ಪೋಸ್ಟ್ ಬಳಿ ಹೆದ್ದಾರಿಯಲ್ಲಿ ಆಯಿಲ್ ಲೀಕ್ ಆಗಿ 3 ಕಾರುಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ