ಕಾರ್ಕಳದಲ್ಲಿ ಅಗ್ನಿ ಅವಘಡ – ಕಂಬಳದ ಎರಡು ಕೋಣಗಳು ಅಗ್ನಿಗೆ ಆಹುತಿ

Date:

spot_img

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕಾಂತಾವರ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ, ಕಂಬಳ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿದ್ದ ಎರಡು ಹೆಸರಾಂತ ಕೋಣಗಳು ಸಾವಿಗೀಡಾದ ದುರಂತ ನಡೆದಿದೆ.

ಬೇಲಾಡಿ ಬಾವ ಅಶೋಕ್ ಶೆಟ್ಟಿ ಅವರಿಗೆ ಸೇರಿದ ಹಟ್ಟಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ‘ಅಪ್ಪು’ ಹಾಗೂ ‘ತೋನ್ಸೆ’ ಎಂಬ ಹೆಸರಿನ ಕೋಣಗಳು ಈ ಅವಘಡದಲ್ಲಿ ಮೃತಪಟ್ಟಿದ್ದು, ಹಲವು ಕಂಬಳ ಕೂಟಗಳಲ್ಲಿ ಪ್ರಶಸ್ತಿ ಗೆದ್ದ ಇವುಗಳು ಗ್ರಾಮದ ಹೆಮ್ಮೆಯಾಗಿದ್ದವು.

ಮೇ 31 ರಂದು ಮುಂಜಾನೆ ಕೆಲಸದಾಳು ಹಟ್ಟಿಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಗೆ ಆಹುತಿಯಾದ ಕೋಣಗಳ ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟು ಎಂದು ಊರವರು ತಿಳಿಸಿದ್ದಾರೆ.

ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣದಲ್ಲಿ ತಂದರೂ, ಕೋಣಗಳ ರಕ್ಷಣೆ ಸಾಧ್ಯವಾಗಲಿಲ್ಲ. ಈ ಘಟನೆ ಗ್ರಾಮದಲ್ಲಿ ಶೋಕ ಸೃಷ್ಟಿಸಿದ್ದು, ಕಂಬಳ ಅಭಿಮಾನಿಗಳಲ್ಲಿ ವಿಷಾದ ವ್ಯಕ್ತವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹುಕ್ಕೇರಿ ಮಾಜಿ ಸೈನಿಕ ಸಾವು ಪ್ರಕರಣ: ಪತ್ನಿ-ಪ್ರಿಯಕರರ ವಿರುದ್ಧ ಕೊಲೆ ಆರೋಪ

ಹುಕ್ಕೇರಿಯಲ್ಲಿ ಮಾಜಿ ಸೈನಿಕನ ಸಾವಿನ ಪ್ರಕರಣಕ್ಕೆ ಹೊಸ ತಿರುವು. ಪತ್ನಿ ಹಾಗೂ ಪ್ರಿಯಕರರ ವಿರುದ್ಧ ಕೊಲೆ ಆರೋಪ, ಮರು ತನಿಖೆ ಆರಂಭ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮ್ಯಾಗಿಯಲ್ಲಿ ಕೀಟ ಪತ್ತೆ: ನೆಸ್ಲೆಗೆ FSSAI ಬಿಗ್ ಶಾಕ್

ಮ್ಯಾಗಿ ನೂಡಲ್ಸ್‌ನಲ್ಲಿ ಕೀಟ ಪತ್ತೆಯಾದ ಆರೋಪದ ಮೇಲೆ ನೆಸ್ಲೆ ಕಂಪನಿಗೆ ಎಫ್ಎಸ್ಎಸ್ಎಐ ನೋಟಿಸ್ ನೀಡಿದ್ದು, ಷೇರು ಮೌಲ್ಯ ಕುಸಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಕಡ್ಡಾಯ: ಡಿಕೆಶಿ ಶಾಕಿಂಗ್ ನ್ಯೂಸ್

ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ನಿಯಮದಲ್ಲಿ ಭಾರಿ ಬದಲಾವಣೆ ತಂದ ಸರ್ಕಾರ. ಮರು ಅರ್ಜಿ ಸಲ್ಲಿಕೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭವ್ಯಾ ಗೌಡ ಬಿಚ್ಚಿಟ್ಟ ಕಿರುತೆರೆಯ ಕಹಿ ಸತ್ಯ

ಶೂಟಿಂಗ್ ಸೆಟ್‌ನಲ್ಲಿ ಮಹಿಳಾ ನಟಿಯರು ಎದುರಿಸುವ ಮುಟ್ಟಿನ ದಿನಗಳ ಕಷ್ಟದ ಬಗ್ಗೆ ಕರ್ಣ ಸೀರಿಯಲ್ ನಟಿ ಭವ್ಯಾ ಗೌಡ ಮಾತನಾಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.