
ನೀರೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡೆಯಂಗಡಿಯ ಅಚ್ಚರಾಕ್ಯಾರು ಎಂಬಲ್ಲಿ ಟ್ರಾನ್ಸ್‌ಫಾರ್ಮರ್ ಕಂಬದಲ್ಲಿ ಬೆಂಕಿ ಹತ್ತಿಕೊಂಡಿದ್ದು ಪರಿಸರದ ಹುಲ್ಲುಗಾಡಿಗೆ ಬೆಂಕಿ ಬಿದ್ದು ಬೆಂಕಿಯು ಪರಿಸರವನ್ನು ಆವರಿಸಿದೆ. ಸುತ್ತಮುತ್ತಲಿನ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ಪ್ರವೃತ್ತರಾಗಿದ್ದರೆ. ಈ ವಿಷಯವನ್ನು ಅಗ್ನಿ ಶಾಮಕ ದಳಕ್ಕೆ ತಿಳಿಸಿದ್ದು ಸ್ಥಳಕ್ಕೆ ಅಗ್ನಿ ಶಾಮಕದಳದ ವಾಹನವು ಇನ್ನಷ್ಟೇ ಬರಬೇಕಿದೆ.ಹೆಚ್ಚಿನ ಮಾಹಿತಿಯೂ ಇನ್ನಷ್ಟೇ ತಿಳಿಯಬೇಕಿದೆ.