
ಉಡುಪಿ : ಕುಂಜಾಲುವಿನಲ್ಲಿ ನಡೆದ ಗೋ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಮಾಧ್ಯಮದ ಮುಂದೆ ನೀಡಿದ ಪ್ರಚೋದನಾತ್ಮಕ ಹೇಳಿಕೆಯ ಕುರಿತಂತೆ ವಿಶ್ವ ಹಿಂದೂ ಪರಿಷತ್ (ವಿಹಿಪ್) ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ತನ್ನ ಪತ್ರಿಕಾಗೋಷ್ಠಿಯಲ್ಲಿ ಶರಣ್ ಪಂಪ್‌ವೆಲ್ ಅವರು ನೀಡಿದ ಹೇಳಿಕೆಗಳು ಜಾತಿ-ಧರ್ಮಗಳ ನಡುವೆ ದ್ವೇಷದ ಬೀಜ ಬಿತ್ತುವಂತಿದ್ದು, ಸಾರ್ವಜನಿಕರಲ್ಲಿ ಗಲಭೆ ಮತ್ತು ಗೊಂದಲಕ್ಕೆ ಕಾರಣವಾಗುವಂತಿವೆ. ಗೋ ಹತ್ಯೆಯ ಪ್ರಕರಣದ ತನಿಖೆ ಇನ್ನೂ ಮುಕ್ತಾಯವಾಗದೇ ಇರುವಾಗಲೇ ಅವರು ಸಾರ್ವಜನಿಕವಾಗಿ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದು, ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಉದ್ದೇಶವಿದೆ ಎಂಬ ಕಾರಣದಿಂದ ಪೊಲೀಸರು ಸ್ವತಃ ತಾವೇ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.