
ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ತನ್ನ 86ನೇ ಸೇವಾ ಯೋಜನೆಯಡಿ ಮಾನವೀಯತೆ ಮೆರೆದಿದೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ನಿವಾಸಿ ಸಂದೀಪ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿತ್ತು.
ಈ ಬಗ್ಗೆ ಸಂದೀಪ್ ರವರು ಸಂಸ್ಥೆಗೆ ಮನವಿ ಸಲ್ಲಿಸಿದ್ದರು . ಇದಕ್ಕೆ ತಕ್ಷಣ ಸ್ಪಂದಿಸಿದ ಸಂಸ್ಥೆಯು ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ, ರಾಜೇಶ್ವರಿ ನವೀನ್, ಕುಶಲ ಸುವರ್ಣ ಹಾಗೂ ಸವಿನ್ ಪೂಜಾರಿ ಅವರ ಮುಖಾಂತರ ₹22,501 ಮೊತ್ತದ ಸಹಾಯಧನವನ್ನು ಸಂದೀಪ್ ಅವರಿಗೆ ಹಸ್ತಾಂತರಿಸಿದೆ .
ಕರಕರಿ ಫ್ರೆಂಡ್ಸ್ ಸೇವಾ ಬಳಗ ನಿರಂತರ ಸೇವಾ ಕಾರ್ಯಗಳಲ್ಲಿ ತೊಡಗಿದ್ದು, ಸಮಾಜಕ್ಕಾಗಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.