
ಕುಂದಾಪುರ: ಯಕ್ಷಗಾನದ ವೇಷದ ವಿಚಾರದಲ್ಲಿ ಕಲಾವಿದನ ಮೇಲೆ ಹಲ್ಲೆ ನಡೆದ ಘಟನೆ ಮಾ. 18ರಂದು ಮಂಗಳವಾರ ರಾತ್ರಿ ಬೈಂದೂರು ತಾಲೂಕಿನ ಎಳ್ಳೂರಿನಲ್ಲಿ ಸಂಭವಿಸಿದೆ.
ಮಾರಣಕಟ್ಟೆ ಯಕ್ಷಗಾನ ಮೇಳದ ‘ಬಿ’ ತಂಡವು “ಮಾರಣಕಟ್ಟೆ ಕ್ಷೇತ್ರ ಮಹಾತ್ಮ” ಯಕ್ಷಗಾನ ಪ್ರದರ್ಶನ ನಡೆಸುತ್ತಿತ್ತು. ಈ ವೇಳೆ ನಂದಿ ವೇಷ ಮಾಡುವ ವಿಚಾರದಲ್ಲಿ ಸ್ತ್ರೀ ವೇಷದಾರಿ ಪ್ರದೀಪ್ ನಾರ್ಕಳಿ ಮತ್ತು ಕಲಾವಿದ ಪ್ರದೀಪ್ ನಾಯ್ಕ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿತ್ತು.
ಆಟ ಮುಗಿದ ನಂತರ ಬೆಳಗಿನ ಜಾವ, ಪ್ರದೀಪ್ ನಾಯ್ಕ ಮನೆಗೆ ಹೋಗುವಾಗ, ತಕರಾರಿನ ವಿಚಾರ ಮತ್ತೆ ತಳಹದಿಯಾಗಿದ್ದು, ಮೇಳದ ಚೌಕಿಯಲ್ಲಿ ಪ್ರದೀಪ್ ನಾರ್ಕಳಿ ಅವರು ಪ್ರದೀಪ್ ನಾಯ್ಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಿರಿಯ ಕಲಾವಿದನ ಈ ವರ್ತನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಪ್ರದೀಪ್ ನಾರ್ಕಳಿ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.