spot_img

ಬೊಜ್ಜಿನ ವಿರುದ್ಧ ಸಮರ: ಕಿವಿ ಹಣ್ಣಿನ ಆರೋಗ್ಯಕಾರಿ ಗುಣಗಳು!

Date:

spot_img

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದೇಹದ ತೂಕ ಹೆಚ್ಚಾಗುವ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಅವಶ್ಯಕ, ಇದರಲ್ಲಿ ಕಿವಿ ಹಣ್ಣು ಮಹತ್ತರ ಪಾತ್ರವಹಿಸುತ್ತದೆ.

ಕ್ಯಾನ್ಸರ್ ತಡೆಯುವ ಶಕ್ತಿ: ಕಿವಿ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಟೋಕೆಮಿಕಲ್ಸ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯಕ.
ತೂಕ ಇಳಿಸಲು ಸಹಾಯ: ಕಡಿಮೆ ಕ್ಯಾಲೊರಿ, ಹೆಚ್ಚಿನ ಫೈಬರ್ ಇರುವ ಕಿವಿ ಹಣ್ಣು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ, ಆಹಾರದ ಬೇಡಿಕೆ ಕಡಿಮೆಯಾಗಿ ತೂಕ ನಿಯಂತ್ರಣ ಸಾಧ್ಯ.
ರೋಗನಿರೋಧಕ ಶಕ್ತಿ ಹೆಚ್ಚಳ: ವಿಟಮಿನ್ C ಸಮೃದ್ಧವಾಗಿರುವ ಈ ಹಣ್ಣು, ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು: ಕಿವಿಯಲ್ಲಿರುವ ಆಕ್ಟಿನಿಡಿನ್ ಎಂಬ ಕಿಣ್ವವು ಜೀರ್ಣಕ್ರಿಯೆಯನ್ನು ಸುಧಾರಿಸಿ, ಉಸಿರಾಟದ ಸಮಸ್ಯೆಗಳನ್ನು ಕಡಿಮೆಯಾಗಿ.
ಚರ್ಮ ಮತ್ತು ಕಣ್ಣಿನ ಆರೋಗ್ಯ: ವಿಟಮಿನ್ C ಸಮೃದ್ಧ ಇರುವ ಕಿವಿ, ಚರ್ಮದ ತೇಜಸ್ಸನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಕಣ್ಣಿನ ಆರೋಗ್ಯಕ್ಕೆ ಲಾಭಕಾರಿ.
ಮಧುಮೇಹ ನಿಯಂತ್ರಣ: ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವುದರಿಂದ, ರಕ್ತದ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ.

ಆರೋಗ್ಯಕರ ಜೀವನಶೈಲಿಗೆ ಕಿವಿ ಹಣ್ಣು ಒಂದು ಉತ್ತಮ ಆಯ್ಕೆಯಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ – ದಿನೇಶ್ ಪೂಜಾರಿ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರು

ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಕಾರ್ಕಳ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್ ಮುಂಬಾಗ ಮಾಡಿರುವ ಪ್ರತಿಭಟನೆಯು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸರಣಿ ವೈಫಲ್ಯವನ್ನು ಮರೆಮಾಚಲು ಮಾಡಿರುವ ನಾಟಕವಾಗಿದೆ.

“ನೀವೇ ದುಡಿಯಬಹುದಲ್ಲ?”: ₹12 ಕೋಟಿ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ತರಾಟೆ!

ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಮತ್ತು ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, "ತಾವೇ ದುಡಿಯಬಹುದಲ್ಲವೇ?" ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.

ತನಿಖೆಗೂ ಮುನ್ನ ಧರ್ಮಸ್ಥಳದ ತೇಜೋವಧೆ ಸಲ್ಲದು: ಸಿ.ಟಿ. ರವಿ ಎಚ್ಚರಿಕೆ!

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ನೇಮಕ ಮಾಡಿರುವುದನ್ನು ಸ್ವಾಗತಿಸುವುದಾಗಿ ಬಿಜೆಪಿ ನಾಯಕ ಸಿ.ಟಿ. ರವಿ ತಿಳಿಸಿದ್ದಾರೆ.

ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಬೆಳಗಾವಿಯಲ್ಲಿ ಆತಂಕ!

ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡ ಆಘಾತಕಾರಿ ಘಟನೆ ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.