ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆಗೆ ಶರಣಾದ ತಂದೆ

Date:

spot_img

ಬೆಂಗಳೂರು: ಬೆಂಗಳೂರಿನ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ದುಃಖಕರ ಘಟನೆ ನಡೆದಿದೆ. ತಂದೆಯೊಬ್ಬರು ತಮ್ಮ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ, ನಂತರ ತಾವೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಂದೆ ಅಶ್ವಥ್ ಅವರು ವಿಷ ಸೇವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರ ಮಕ್ಕಳಾದ ಯುವವರ್ಧನ್ ಮತ್ತು ಮಿಥುನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪತ್ನಿಯ ಕಿರುಕುಳ ಆರೋಪ

ಪತಿ ಅಶ್ವಥ್ ಅವರ ಕಿರುಕುಳ ತಾಳಲಾರದೇ ಪತ್ನಿ ತವರು ಮನೆ ಸೇರಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ನಿನ್ನೆ ಪತ್ನಿಯ ಮನೆಗೆ ತೆರಳಿದ್ದ ಅಶ್ವಥ್, ಇಬ್ಬರು ಮಕ್ಕಳನ್ನು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಈ ದುರಂತಕ್ಕೆ ಶರಣಾಗಿದ್ದು, ಮಕ್ಕಳಿಗೆ ವಿಷ ಕುಡಿಸಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಈ ಘಟನೆ ಕುರಿತು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ