ಬೆಂಗಳೂರಿಗೆ ನಕಲಿ ‘ನಂದಿನಿ’ ತುಪ್ಪ ಸರಬರಾಜು ಜಾಲ ಪತ್ತೆ: ಕೆಎಂಎಫ್ ವಿತರಕ, ಪುತ್ರ ಸೇರಿ ನಾಲ್ವರ ಬಂಧನ

Date:

spot_img

ಬೆಂಗಳೂರು: ನಗರದಲ್ಲಿ ನಕಲಿ ‘ನಂದಿನಿ’ ತುಪ್ಪ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಕೆಎಂಎಫ್ ಡಿಸ್ಟ್ರಿಬ್ಯೂಟರ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿ ₹1.5 ಕೋಟಿ ರೂ. ಮೌಲ್ಯದ 8,000 ಲೀಟರ್ ನಕಲಿ ತುಪ್ಪವನ್ನು ಸೀಜ್ ಮಾಡಿದ್ದಾರೆ.

ಬಂಧಿತ ಆರೋಪಿಗಳನ್ನು ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಅವರ ಪುತ್ರ ದೀಪಕ್, ಹಾಗೂ ಸಪ್ಲೈರ್‌ಗಳಾದ ಮುನಿರಾಜು ಮತ್ತು ಅಭಿ ಅರಸು ಎಂದು ಗುರುತಿಸಲಾಗಿದೆ.

ಹೊರ ರಾಜ್ಯದಲ್ಲಿ ತಯಾರಿಕೆ, ಬೆಂಗಳೂರಿನಲ್ಲಿ ಸರಬರಾಜು

ಬಂಧಿತ ಆರೋಪಿಗಳು ಸೇರಿಕೊಂಡು ಹೊರ ರಾಜ್ಯದಲ್ಲಿ ಕಲಬೆರಕೆ ತುಪ್ಪವನ್ನು ತಯಾರಿಸಿ, ಅದನ್ನು ಪ್ಯಾಕೆಟ್ ಹಾಗೂ ಪ್ಲ್ಯಾಸ್ಟಿಕ್ ಬಾಟಲ್‌ಗಳಲ್ಲಿ ತುಂಬಿಸಿ ಬೆಂಗಳೂರಿನಲ್ಲಿದ್ದ ನಂದಿನಿ ಪಾರ್ಲರ್‌ಗಳಿಗೆ ಸರಬರಾಜು ಮಾಡುತ್ತಿದ್ದರು. ಓರ್ವ ಆರೋಪಿ ತಮಿಳುನಾಡಿನಿಂದ ಕಲಬೆರಕೆ ತುಪ್ಪವನ್ನು ಸಪ್ಲೈ ಮಾಡಿದರೆ, ಇನ್ನೋರ್ವ ಅದನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದ. ಈ ಜಾಲದಲ್ಲಿ ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮತ್ತು ಅವರ ಪುತ್ರ ಕೂಡ ಭಾಗಿಯಾಗಿರುವುದು ತಿಳಿದುಬಂದಿದೆ.

ಸದ್ಯ ಪೊಲೀಸರು ಈ ನಾಲ್ವರ ಮುಖವಾಡ ಕಳಚಿ ಬಂಧಿಸಿದ್ದು, ಗ್ರಾಹಕರಿಗೆ ಮೋಸ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ವಿಳಂಬ: ಹೈಕಮಾಂಡ್ ನಿರ್ಧಾರ ಶೀಘ್ರ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತೆ ವಿಳಂಬಗೊಂಡಿದೆ. ಹೈಕಮಾಂಡ್ ಅನುಮೋದನೆಗಾಗಿ ನಾಯಕರು ಕಾಯುತ್ತಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಇಂಡಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

ಇಂಡಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್ ಪತ್ತೆಯಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಐಐಟಿ ರೂರ್ಕಿಯಲ್ಲಿ ರಾಜಕೀಯ ಪೋಸ್ಟ್‌ಗೆ ನಿಷೇಧ: ಜಾಲತಾಣದಲ್ಲಿ ಆಕ್ರೋಶ

ಐಐಟಿ ರೂರ್ಕಿ ತನ್ನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ರಾಜಕೀಯ ಪೋಸ್ಟ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಂಜೊಟ್ಟಿಯಲ್ಲಿ ಜುಲೈ 26 ರಂದು ‘ಕೆಸರ್ಡ್ ಒಂಜಿ ದಿನ’ ಕ್ರೀಡಾಕೂಟ!

ಬೊಮ್ಮಾರಬೆಟ್ಟು ಗ್ರಾಮಸ್ಥರಿಗಾಗಿ ಹಿರಿಯಡ್ಕ ಮಂಜೊಟ್ಟಿಯಲ್ಲಿ 'ಕೆಸರ್ಡ್ ಒಂಜಿ ದಿನ' ಗ್ರಾಮೀಣ ಕ್ರೀಡಾಕೂಟ ಆಯೋಜನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ