
ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ .ಸಿ.ಟ್ರಸ್ಟ್ (ರಿ) ಉಡುಪಿ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಣಿಪಾಲ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ರಾಡಿ ಇವರ ಸಹಯೋಗದೊಂದಿಗೆ ಗಿಡ ನಾಟಿ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮವನ್ನು ದಿನಾಂಕ 22/7/2025ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸತ್ಯಾನಂದ ನಾಯಕ್ ಅಧ್ಯಕ್ಷರು ತಾಲೂಕು ಜನಜಾಗೃತಿ ವೇದಿಕೆ ಉಡುಪಿ ಇವರು ನೆರವೇರಿಸಿದರು. ರೋಟೇರಿಯನ್ ರಾಜವರ್ಮ ಅಡಿಗ ಇವರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಿ ಬಹುಮಾನ ವಿತರಣೆಯನ್ನು ಮಾಡಲಾಯಿತು. ಕ್ಯಾಪ್ಟನ್ ಹರೀಶ್ ಎನ್ ದೇವಾಡಿಗ ಶೌರ್ಯ ಘಟಕ ಉಡುಪಿ ತಾಲೂಕು, ಶ್ರೀಮತಿ ಪೂರ್ಣಿಮಾ ಅಧ್ಯಕ್ಷರು ಸ್ವಸಹಾಯ ಸಂಘಗಳ ಒಕ್ಕೂಟ, ಶ್ರೀಮತಿ ಸರಸ್ವತಿ ಶಾಲಾ ಮುಖ್ಯೋಪಾಧ್ಯಾಯರು, ಸ್ವ ಸಹಾಯ ಸಂಘಗಳ ಸದಸ್ಯರು, ಶೌರ್ಯ ಘಟಕದ ಸದಸ್ಯರು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಸೇವಾ ಪ್ರತಿನಿಧಿ ಜರೀನಾಬಾನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯೋಜನೆಯ ಉಡುಪಿ ತಾಲೂಕಿನ ಕೃಷಿ ಅಧಿಕಾರಿ ಮಂಜುನಾಥ್ ರವರು ಸ್ವಾಗತಿಸಿದರು. ಶಾಲಾ ಶಿಕ್ಷಕಿ ಧನ್ಯವಾದವನ್ನು ಸಮರ್ಪಿಸಿ, ವಲಯದ ಮೇಲ್ವಿಚಾರಕ ಬಾಲಚಂದ್ರರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

