spot_img

‘ವಿಕಸಿತ ಭಾರತದ ಅಮೃತಕಾಲ’ – ‘ಸೇವೆ, ಆಡಳಿತ ಮತ್ತು ಬಡವರ ಕಲ್ಯಾಣದ ನರೇಂದ್ರ ಮೋದಿ ಆಡಳಿತಕ್ಕೆ ಸಾರ್ಥಕ 11 ವರ್ಷ’: ಕೆ.ಉದಯ ಕುಮಾರ್ ಶೆಟ್ಟಿ

Date:

ದೇಶದಲ್ಲಿ ಒಂದು ಒಳ್ಳೆಯ ಸರಕಾರ ಆಡಳಿತದಲ್ಲಿದ್ದಾಗ ದೇಶ ಹೇಗೆ ಉತ್ತಮ ಪ್ರಗತಿಯೊಂದಿಗೆ ಸಾಧನೆಯ ಉತ್ತುಂಗಕ್ಕೇರಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವೇ ಸಾಕ್ಷಿ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ವಿಕಸಿತ ಭಾರತ ಅಭಿಯಾನದ ವಿಭಾಗ ಸಂಚಾಲಕ ಕೆ.ಉದಯಕುಮಾರ್ ಶೆಟ್ಟಿ ಹೇಳಿದರು.

ಅವರು ಕಡಿಯಾಳಿಯ ಹೋಟೆಲ್ ಒಷಿಯನ್ ಪರ್ಲ್ ಸಭಾಂಗಣದಲ್ಲಿ ‘ವಿಕಸಿತ ಭಾರತದ ಅಮೃತಕಾಲ’ – ‘ಸೇವೆ, ಆಡಳಿತ ಮತ್ತು ಬಡವರ ಕಲ್ಯಾಣದ ನರೇಂದ್ರ ಮೋದಿ ಆಡಳಿತಕ್ಕೆ ಸಾರ್ಥಕ 11 ವರ್ಷ’ ವಿಷಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಹಿಂದೆ ಹಲವಾರು ಸರಕಾರಗಳನ್ನು ಕಂಡಿದ್ದೇವೆ. ಅದಕ್ಕಿಂತ ಮೋದಿ ನೇತೃತ್ವದ ಕೇಂದ್ರ ಸರಕಾರ ಹೇಗೆ ವಿಭಿನ್ನವಾಗಿದೆ ಎನ್ನುವುದನ್ನು 11 ವರ್ಷಗಳ ಆಡಳಿತದಲ್ಲಿ ಮಾಡಿದ ಸಾಧನೆಗಳ ಕೆಲವು ಅಂಕಿ ಅಂಶಗಳ ಮೂಲಕ ಉಲ್ಲೇಖಿಸಬಹುದು.

ಕಳೆದ 11 ವರ್ಷಗಳಲ್ಲಿ ಕೋಟ್ಯಾಂತರ ಕುಟುಂಬಗಳು ಮೊದಲ ಬಾರಿ ಕೆಲವು ಮೂಲಭೂತ ಸೌಲಭ್ಯವನ್ನು ಪಡೆದುಕೊಂಡವು.

55.22 ಕೋಟಿ ಜನಧನ್ ಖಾತೆಗಳು, ಪ್ರಧಾನಮಂತ್ರಿ ಅವಾಜ್ ಯೋಜನೆಯಲ್ಲಿ 4 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ, 12 ಕೋಟಿ ಶೌಚಾಲಯಗಳ ನಿರ್ಮಾಣ, 81 ಕೋಟಿ ಜನತೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ, 10.33 ಕೋಟಿ ಜನತೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ, 52.5 ಕೋಟಿ ಜನತೆಗೆ ಮುದ್ರಾ ಸಾಲ ಯೋಜನೆ ಸಾಲ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 11 ಕೋಟಿ ರೈತರಿಗೆ ಪ್ರತೀ ವರ್ಷ 6000 ರೂಪಾಯಿ ನಗದು ವರ್ಗಾವಣೆ, 40 ಕೋಟಿ ಜನತೆಗೆ ಪ್ರಧಾನ ಮಂತ್ರಿ ಆಯುಷ್ಮಾನ್‌ ಕಾರ್ಡ್ ಯೋಜನೆ ಹಾಗೂ ಪ್ರಸಕ್ತ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆ ಮುಂತಾದ ಹಲವಾರು ಸೌಲಭ್ಯಗಳೊಂದಿಗೆ ಬಿಜೆಪಿಯ ಸರ್ವವ್ಯಾಪಿ, ಸರ್ವಸ್ಪರ್ಶಿ ಸಂಕಲ್ಪ ಸಾಕಾರಗೊಂಡಿದೆ. ಸುಸಜ್ಜಿತ ಭದ್ರತಾ ವ್ಯವಸ್ಥೆಯ ಜೊತೆಗೆ ಸದೃಢ ಆರ್ಥಿಕತೆಯಲ್ಲಿ ವಿಶ್ವದಲ್ಲಿ 4ನೇ ಸ್ಥಾನಕ್ಕೇರುವ ಮೂಲಕ ಭಾರತಕ್ಕೆ ವಿಶ್ವ ಮನ್ನಣೆ ದೊರೆತಿದೆ ಎಂದು ಉದಯ ಕುಮಾರ್ ಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ವಿಕಸಿತ ಭಾರತ ಅಭಿಯಾನದ ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಅಭಿಯಾನದ ಜಿಲ್ಲಾ ಸಹ ಸಂಚಾಲಕರಾದ ಸಂಧ್ಯಾ ರಮೇಶ್, ದಿಲೇಶ್ ಶೆಟ್ಟಿ, ಜಿಲ್ಲಾ ವಕ್ತಾರರಾದ ಗೀತಾಂಜಲಿ ಎಮ್. ಸುವರ್ಣ, ವಿಜಯ ಕುಮಾರ್ ಉದ್ಯಾವರ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

“ನನ್ನ ಭಾಷಣದಲ್ಲಿ ಕೋಮುವಾದ ಪ್ರಚೋದನೆಯಾಗಿಲ್ಲ”: ಚಕ್ರವರ್ತಿ ಸೂಲಿಬೆಲೆ

ಸಾಮಾಜಿಕ ಕಾರ್ಯಕರ್ತ ಹಾಗೂ ಉಪನ್ಯಾಸಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ದಾಖಲಾದ ಆರೋಪ ಮತ್ತು ಪೊಲೀಸ್ ನೋಟೀಸ್‌ಗಳಿಗೆ ಪ್ರತಿಕ್ರಿಯಿಸಿರುವ ಅವರು, “ನನ್ನನ್ನು ರೌಡಿಶೀಟರ್ ಅಥವಾ ಗೂಂಡಾ ಎನಿಸಿ ಗಡಿಪಾರು ಮಾಡಲು ಸಾಧ್ಯವಿಲ್ಲ.

ತುಳು ಭಾಷೆ ಬಳಕೆ ವಿವಾದ: ಜಿ.ಪಂ ಪತ್ರ ಚರ್ಚೆಗೆ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆಗೆ ರಾಜ್ಯಭಾಷಾ ಮಾನ್ಯತೆ ನೀಡಬೇಕೆಂಬ ಹೋರಾಟ ಬಿಗಿಗೊಂಡಿದ್ದ ಸಂದರ್ಭದಲ್ಲಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕರಿಗೆ ದ.ಕ. ಜಿಲ್ಲಾ ಪಂಚಾಯತ್ ಕಳುಹಿಸಿದ ಒಂದು ಪತ್ರ ಚರ್ಚೆಗೆ ಗ್ರಾಸವಾಗಿದೆ.

“ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವ ನೀತಿ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿಯಿಂದ ತೀವ್ರ ವಾಗ್ದಾಳಿ”

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೈರಂಪಳ್ಳಿಯಲ್ಲಿ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ ವಿತರಣೆ

ಈ ವರ್ಷದ ಎಲ್ಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರವನ್ನು ಶ್ರಮಿಕ ತರುಣರ ತಂಡ ಬೈರಂಪಳ್ಳಿ ವತಿಯಿಂದ ವಿತರಿಸಲಾಯಿತು