
ಉಡುಪಿ: ಶ್ರೀ ಪುತ್ತಿಗೆ ಮಠದ ಕೆಮುಂಡೆಲು ಶಾಲೆಯಲ್ಲಿ 2025ರ ರೋಟರಿ ಸಹಯೋಗದಲ್ಲಿ ‘ರವಿ ಸಂತು ಬಳಗ ಬೆಂಗಳೂರು’ ವತಿಯಿಂದ ಮಹತ್ವದ ಕಾರ್ಯಕ್ರಮ ನಡೆಯಿತು. ಈ ವೇಳೆ ಶಾಲೆಗೆ ಕಲಿಕೋಪಕರಣಗಳನ್ನು ವಿತರಿಸುವುದರ ಜೊತೆಗೆ, ಶಾಲಾ ಶಿಕ್ಷಕರಿಗೆ ‘ರಾಜ್ಯ ಸೇವಾ ರತ್ನ’ ಸನ್ಮಾನ ಮಾಡಲಾಯಿತು.

ಶಿಕ್ಷಕಿ ಸುನೀತಾ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತ ಮತ್ತು ಧನ್ಯವಾದ ಸಮರ್ಪಿಸಿದರು. ಶಾಲಾ ಮುಖ್ಯ ಶಿಕ್ಷಕರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಉಪಸ್ಥಿತರಿದ್ದ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಾನಂದ ರಾವ್ ಅವರು ಅತಿಥಿಗಳ ಕಾರ್ಯವೈಖರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.