spot_img

ದಸರಾ ಉದ್ಘಾಟನೆ ವಿವಾದ: ಭಾನು ಮುಸ್ತಾಕ್ ಗೆ ಬಹಿರಂಗ ಪತ್ರ ಬರೆದ ಸಂವಿಧಾನ ತಜ್ಞ ಡಾ.ಸುಧಾಕರ ಹೊಸಳ್ಳಿ

Date:

spot_img

ಮೈಸೂರು : 2025ರ ನಾಡಹಬ್ಬ ದಸರಾ ಉದ್ಘಾಟನೆಗೆ ಖ್ಯಾತ ಸಾಹಿತಿ ಭಾನು ಮುಸ್ತಾಕ್ ಅವರನ್ನು ಆಹ್ವಾನಿಸಿರುವ ಸರ್ಕಾರದ ಕ್ರಮಕ್ಕೆ ಸಂಬಂಧಿಸಿದಂತೆ ಹೊಸ ವಿವಾದ ಸೃಷ್ಟಿಯಾಗಿದೆ. ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ರಾಜ್ಯಾಧ್ಯಕ್ಷ ಡಾ. ಸುಧಾಕರ ಹೊಸಳ್ಳಿ ಅವರು ಭಾನು ಮುಸ್ತಾಕ್ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಇಸ್ಲಾಂನ ಕಾಫಿರ ತತ್ವವನ್ನು ಸಾರ್ವಜನಿಕವಾಗಿ ತಿರಸ್ಕರಿಸುವಂತೆ ಆಗ್ರಹಿಸಿದ್ದಾರೆ.

ಪತ್ರದಲ್ಲಿನ ವಿವರ

ದಿನಾಂಕ 24.08.2025
ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ, ಕರ್ನಾಟಕ
ಬಾನು ಮುಸ್ತಾಕ್ ರಿಗೆ ಬಹಿರಂಗ ಪತ್ರ

(ಇಸ್ಲಾಂನ ಕಾಫಿರಾ ತತ್ವ ಮೀರಿ ದಸರಾ ಉದ್ಘಾಟನೆ ಮಾಡಬಲ್ಲಿರಾ? )

ಗೌರವಾನ್ವಿತ ಭಾನು ಅವರೇ,

2025 ನೇ ಸಾಲಿನ ನಾಡ ಹಬ್ಬ ದಸರಾ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಿದ ಸರ್ಕಾರದ ಕ್ರಮ ಶ್ಲಾಘನೀಯವಾದದ್ದು. ಇತ್ತೀಚಿಗೆ ತಮ್ಮ ವಿಶಿಷ್ಟ ಸಾಹಿತ್ಯ ಕೊಡುಗೆಗಾಗಿ ಬೂಕರ್ ಪ್ರಶಸ್ತಿ ಪಡೆದು ಕನ್ನಡಿಗರನ್ನು, ಕರ್ನಾಟಕವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿನಂದನೆಗೆ ಒಳಪಡುವಂತೆ ಮಾಡಿದ್ದೀರಿ. ತಮಗೆ ಹೃತ್ಪೂರ್ವಕ ಧನ್ಯವಾದಗಳು.

ರಾಜ ಪರಂಪರೆಯಿಂದ ನೂರಾರು ವರ್ಷಗಳ ಹಿಂದೆ ಪ್ರಾರಂಭವಾಗಿ ಸರ್ಕಾರ ಮತ್ತು ರಾಜ ಪರಂಪರೆಯ ಸಹಯೋಗದೊಂದಿಗೆ ಪ್ರತಿ ವರ್ಷವೂ ಆಚರಿಸಲ್ಪಡುವ ಜಗತ್ವಿಖ್ಯಾತ ನಾಡ ಹಬ್ಬದ ಉದ್ಘಾಟನೆಗೆ ಸರ್ಕಾರದ ಕರೆಯ ಮೇರೆಗೆ ತಾವು ಒಪ್ಪಿಗೆ ಸೂಚಿಸಿರುವುದು ಕ್ರಾಂತಿಕಾರಕ ಬೆಳವಣಿಗೆ. ನಾಡ ಹಬ್ಬದ ಆಚರಣೆಯ ಹಿಂದೆ ಶ್ರದ್ಧೆ, ಭಕ್ತಿ ,ಸಂಸ್ಕಾರ, ಹಿಂದೂ ಧರ್ಮದ ಜನಜೀವನ ಪದ್ಧತಿ, ಆಚರಣೆಗಳು, ನಡವಳಿಕೆಗಳು ಹೀಗೆ ಬಹಳ ದೊಡ್ಡ ಸಂಗತಿಗಳು ಪ್ರಾಣ ಸಂಬಂಧವನ್ನು ಹೊಂದಿವೆ. ಸಂವಿಧಾನ ರಚನೆಯ ನಂತರವೂ ಇಂತಹ ವಿಶೇಷ ಆಚರಣೆಗಳು ಜನಮನ್ನಣೆ ಪಡೆದಿವೆ ಮತ್ತು ಇದರ ಮುಂದುವರಿಕೆಗೆ ಸಂವಿಧಾನವು ಸಾತ್ವಿಕವಾಗಿಯೇ ಸಹಮತಿಸಿದೆ.
ಭಾರತದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಧರ್ಮ, ಮತ ಮತ್ತು ರಿಲಿಜಿಯನ್ ಗಳನ್ನು ಆಚರಿಸುವ ಸಾಂವಿಧಾನಿಕ ಸ್ವಾತಂತ್ರ್ಯವೂ ಇದೆ. ಆ ನಿಟ್ಟಿನಲ್ಲಿ ತಾವು ಇಸ್ಲಾಂ ರಿಲಿಜಿಯನನ್ನು ಅನುಸರಿಸುತ್ತಿದ್ದೀರಿ, ಆ ಸ್ವಾತಂತ್ರ್ಯವು ತಮಗಿದೆ.

ರಿಲಿಜನನ್ನು ಆಚರಿಸುವ ಸಾಹಿತಿಯೊಬ್ಬರಿಂದ ದಸರಾ ಉದ್ಘಾಟನೆ ಮಾಡಿಸುವ ಕ್ರಮವನ್ನು ಹಿಂದೂ ಸಮಾಜವೂ ತನ್ನ ಹೃದಯ ವೈಶಾಲ್ಯದ ಕಾರಣಕ್ಕಾಗಿ ,ವಸುದೇವ ಕುಟುಂಬಕಂ ಚಿಂತನೆಯ ಕಾರಣಕ್ಕಾಗಿ ಸ್ವಾಗತ ಮಾಡಿದೆ. ಆದರೆ ನೀವು ಆಚರಿಸುವ ಇಸ್ಲಾಂ ರಿಲಿಜನ್ ನಲ್ಲಿ ಮೂರ್ತಿ ಪೂಜೆಯನ್ನು ಬಹಿಷ್ಕರಿಸಲಾಗಿದೆ.ಅಷ್ಟೇ ಅಲ್ಲದೆ, ಮೂರ್ತಿ ಪೂಜಕರನ್ನು, ಇಸ್ಲಾಂ ಒಪ್ಪದವರನ್ನು ಕಾಫಿರರು ಎಂದು ಗುರುತಿಸಲಾಗುತ್ತದೆ. ಬಹಳ ಮುಖ್ಯವಾಗಿ ಕಾಫಿರ ತತ್ವದ ಅನುಸಾರ ಮೂರ್ತಿಪೂಜಕರನ್ನು ಕೊಲ್ಲಬೇಕು, ಅವರ ಧರ್ಮ ಶ್ರದ್ಧೆಯನ್ನು ನಾಶ ಮಾಡಬೇಕು ಎಂದು ಇಸ್ಲಾಂನ ಪವಿತ್ರ ಗ್ರಂಥ ಕುರಾನ್ ನಲ್ಲಿ ತಿಳಿಸಲಾಗಿದೆ. ಈ ಮಾಹಿತಿಯನ್ನು ಇರಾನ್ನ ಖ್ಯಾತ ಇಸ್ಲಾಂ ಲೇಖಕ ಆಲಿ ಸೀನಾ ತಮ್ಮ ಅಂಡರ್ಸ್ಟ್ಯಾಂಡಿಂಗ್ ಇಸ್ಲಾಂ ಅಂಡ್ ಮಹಮ್ಮದ್ ಕೃತಿಯಲ್ಲಿ ದಾಖಲು ಮಾಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ದೊರೆತ ಟಿಪ್ಪು ಸುಲ್ತಾನನ 16 ಶಾಸನಗಳಲ್ಲಿ ಕಾಫಿರ ಚಿಂತನೆಯ ಸ್ಪಷ್ಟ ಕಲ್ಪನೆಯನ್ನು ಲಿಖಿತವಾಗಿ ಉಲ್ಲೇಖ ಮಾಡಲಾಗಿದೆ . ಇದನ್ನು ಎಪಿಗ್ರಾಫಿಯ ಆಫ್ ಕರ್ನಾಟಿಕ ಎಂಬ ಸರ್ಕಾರಿ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.( ಸಂಪುಟ 6 ಶಾಸನ ಸಂಖ್ಯೆ 16 17 18 19 20 21 22 23 24 63 64 159 188 )

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಪಾಕಿಸ್ತಾನ ಕೃತಿಯಲ್ಲಿ ಹಸನ್ ನಿಜಾಮಿ ಉಕ್- ಉಕ್ ಬಿ. ಮುಂತಾದ ಇತಿಹಾಸಕಾರರ ಉಲ್ಲೇಖಗಳನ್ನು ದಾಖಲು ಮಾಡಿ ಮುಸ್ಲಿಂ ದಾಳಿ ಕೊರರಾದ ಮಹಮದ್ ಘೋರಿ, ಮೊಹಮದ್ ಘಜನಿ , ಅಲ್ಲಾವುದ್ದೀನ್ ಖಿಲ್ಜಿ ಕಾಫಿರ ತತ್ವದ ಅಡಿಯಲ್ಲಿ ಹಿಂದೂ ದೇವಾಲಯಗಳನ್ನು ನಾಶ ಮಾಡಿ, ಹಿಂದೂಗಳ ಧರ್ಮ ಶ್ರದ್ಧೆಯನ್ನು ಇಸ್ಲಾಂನ ಆಜ್ಞೆಯಂತೆ ವಿಘಟಿಸುವ ಕಾರ್ಯದಲ್ಲಿ ಮಗ್ನವಾಗಿದ್ದರು ಎಂದು ತಿಳಿಯಪಡಿಸಿದ್ದಾರೆ.(ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಸಂಪುಟ -6 ಪುಟ ಸಂಖ್ಯೆ 418,419,420,) ಹಾಗಾಗಿ ತಾವು ಇಸ್ಲಾಂನ ಈ ಕ್ರೂರ ಮತ್ತು ಮನುಕುಲಕ್ಕೆ ಅಪಾಯ ತರುವ ಹಾಗೂ ಸಂವಿಧಾನದ ನಿಯಮಗಳನ್ನು ವಿರೋಧಿಸುವ ಕಾಫಿರ ತತ್ವವನ್ನು ತಿರಸ್ಕಾರ ಮಾಡಿ, ಅದನ್ನು ಸಾರ್ವಜನಿಕವಾಗಿ ಘೋಷಣೆ ಮಾಡಿ ನಾಡ ಹಬ್ಬವನ್ನು ಉದ್ಘಾಟನೆ ಮಾಡಬೇಕು. ಇಲ್ಲ ತಾವು ಇಸ್ಲಾಂ ರಿಲಿಜಿಯನನ್ನೇ ಅನುಸರಿಸುವುದಾದರೆ, ಗೌರವ ಪೂರಕವಾಗಿ ದಸರಾ ಉದ್ಘಾಟನೆಯಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸುತ್ತೇನೆ.

ಸಂವಿಧಾನದ ಮೂಲ ಆಶಯಗಳನ್ನೇ ತಿರಸ್ಕರಿಸುವ ಉಲ್ಲಂಘಿಸುವ ಕಾಫಿರ ತತ್ವವನ್ನು ಅನುಸರಿಸಿಯೇ ಆಚರಿಸಿಯೇ ದಸರಾ ಉದ್ಘಾಟನೆ ಮಾಡುವುದು ಸಾಂವಿಧಾನಿಕವಾಗಿಯೂ ಅಪರಾಧವಾಗುತ್ತದೆ ಎಂಬುದನ್ನು ಶ್ರದ್ಧೆಯಿಂದ ತಮ್ಮ ಅವಗಾಹನೆಗೆ ತರಲಾಗಿದೆ.

ಡಾ.ಸುಧಾಕರ ಹೊಸಳ್ಳಿ
ಸಂವಿಧಾನ ತಜ್ಞ ಹಾಗೂ ರಾಜ್ಯಾಧ್ಯಕ್ಷ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸಾಲಬಾಧೆಗೆ ಮನನೊಂದು ದಂಪತಿ ಆತ್ಮಹತ್ಯೆ: 4 ವರ್ಷದ ಮಗನಿಗೂ ವಿಷಪ್ರಾಶನ

ತೀವ್ರ ಆರ್ಥಿಕ ಸಾಲದಿಂದ ಮನನೊಂದ ಉದ್ಯಮಿ ದಂಪತಿಗಳು ತಮ್ಮ 4 ವರ್ಷದ ಮಗನಿಗೆ ವಿಷ ನೀಡಿ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ – ರೋಷನ್

ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿಯಾಗಿ ಕನ್ನಡಿಗರ ಮನೆ ಮಾತಾಗಿದ್ದ ಆ್ಯಂಕರ್ ಅನುಶ್ರೀ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿ ಜಿ ಬಾಲಕಿಯರ ವಸತಿ ನಿಲಯ ಹಾಗೂ ಎಸ್ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗಣೇಶ ಪ್ರತಿಷ್ಠಾಪನೆ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿ ಜಿ ಬಾಲಕಿಯರ ವಸತಿ ನಿಲಯ ಹಾಗೂ ಎಸ್ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೆಬ್ರಿ ಸುವರ್ಣ ಸಂಭ್ರಮ ಅಂಗವಾಗಿ ಗಣಪತಿ ಪ್ರತಿಷ್ಠಾಪನೆ ಮತ್ತು ಸ್ವರ್ಣ ಕಿರೀಟದ ಸಮರ್ಪಣೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೆಬ್ರಿ ಸುವರ್ಣ ಸಂಭ್ರಮ ಅಂಗವಾಗಿ ಗಣಪತಿ ಪ್ರತಿಷ್ಠಾಪನೆ ಮತ್ತು ಸ್ವರ್ಣ ಕಿರೀಟದ ಸಮರ್ಪಣೆ ಮತ್ತು ಗಣ ಹೋಮ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.