
ತುರ್ತು ಪರಿಸ್ಥಿತಿ ಸಾಧಕ ಬಾದಕಗಳು:-
50 ವರ್ಷದ ಹಿಂದೆ ಆಗಿನ ಪ್ರಾಧಾನಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಜಾರಿಮಾಡಿದರು. ಈ ಸಮಯದಲ್ಲಿ ಜನರ ಸ್ವತಂತ್ರ ಮೊಟಕುಗೊಳಿಸುವುದು, ದಸ್ತಿಗಿರಿ, ಇತ್ಯಾದಿ ನಡೆಯಿತು ಆದರೆ ಅದೇ ಸಮಯದಲ್ಲಿ ಬಡವರ, ಕಾರ್ಮಿಕರ, ಮಹಿಳೆಯರ, ಸಣ್ಣ ರೈತರ, ಅತಿಸಣ್ಣ ರೈತರ, ಮೀನುಗಾರರ, ಕೋಳಿ ಸಾಕಾಣಿಕೆ ಮಾಡುವವರ, ಕೂಲಿ ಕಾರ್ಮಿಕರ, ಜೀತದ ಆಳುಗಳಿಗೆ, ಸಾಲದ ಸುಳಿಗೆ ಸಿಕ್ಕವರಿಗೆ, ಜಮೀನು ರಹಿತರಿಗೆ, ಗೆಣಿದಾರರಿಗೆ, ಹಿಂದುಳಿದ ವರ್ಗಗಳಿಗೆ, SCST ವರ್ಗಗಳಿಗೆ(ಬಡ್ತಿ), ಅಸ್ಪೃಶ್ಯರಿಗೆ, ಮಹಿಳಾ ಕಾರ್ಮಿಕರಿಗೆ ಮತ್ತು ಇನ್ನೂ ಅನೇಕ ತುಳಿತಕ್ಕೆ ಒಳಪಟ್ಟ ಎಲ್ಲಾ ಸಮುದಾಯದ ಏಳಿಗೆಗಾಗಿ ಅನೇಕ ಕಾನೂನು ಮತ್ತು ಯೋಜನೆಗಳ ಜಾರಿಯಾಗಿ ಅನೇಕ ಕಾನೂನುಗಳ ಮಾರ್ಪಡು ಮಾಡಿಲಾಗಿತ್ತು.
ಹಾವನೂರ್ ವರದಿ ಜಾರಿ ಬಂದಾಗ ಮುಂದುವರೆದ ಜನಗಳ ಮಾತು ನಂಬಿ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಇದ್ದ ಬಹುಪಾಲು ಜನ ತಮ್ಮ ಹಿತ ಕಾಪಾಡಲು ಬಂದ ಈ ವರದಿಯ ವಿರುದ್ಧ ಬೀದಿಗಿಳಿದು ಹೋರಾಡಿದರು. ಹಾವನೂರ್ ಕುಟುಂಬಕ್ಕೆ ಮನೆ, ಶಾಲೆ ಮುಂತಾದ ಕಡೆ ಹೋಗಿ ಧರ್ಪ ತೋರಿದರು.
ಅಂದು ವಿರೋಧಿಸಿದವರೇ ಇಂದು ಪಲಾನುಭವಿಗಳು. ಈ ವರದಿ ವಿರೋಧಿಸಿ ಪ್ರತಿಭಟನೆ ಮುಗಿಲು ಮುಟ್ಟಿದಾಗ emergency declare ಆಗಿದ್ದರಿಂದ ಅನೇಕ ಮುಖಂಡರು ಜೈಲು ಸೇರಿದರು, ಕೆಲವರು ಭೂಗತರಾದರು. ಇದರಿಂದ ಹಾವನೂರ್ ವರದಿ ಜಾರಿ ಮಾಡಲು ಅನುಕೂಲ ಆಯಿತು ಇದೆ ಸಮಯದಲ್ಲಿ
1) ಋಣ ಮುಕ್ತ ಕಾಯಿದೆ 1976 ಜಾರಿಗೆ ತಂದರು. ಇದರಿಂದ ಅಧಿಕ ಬಡ್ಡಿಯನ್ನು ವಸೂಲು ಮಾಡುತ್ತಿದ್ದವರಿಗೆ ಕಡಿವಾಣ ಹಾಕಲಾಯಿತು. ಎಲ್ಲಾ ವರ್ಗದ ಬಡವರ ಆಸ್ತಿ ವಾಪಾಸ್ ಬರುವಂತಾಯಿತು.
2) ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯಿಂದ ರೈತರ ಮತ್ತು ಕಡಿಮೆ ಆದಾಯ ದವರು (ಶ್ರೀಮಂತರಲ್ಲದವರು) ಮಾತ್ರ ಕೃಷಿ ಜಮೀನು ಖರೀದಿ ಮಾಡಲು ಕಲಂ 79 ಮತ್ತು 80 ಅಳವಡಿಸಲಾಯಿತು. ಇದರಿಂದ ಶ್ರೀಮಂತರು ಹೆರಳವಾಗಿ ಜಮೀನು ಖರೀದಿಸಲು ನಿರ್ಬಂಧ ಹೆರಲಾಯಿತು
3) ನಾಗರಿಕ ಹಕ್ಕು ಜಾರಿ ಕಾಯ್ದೆ. ಈ ಕಾಯ್ದೆಯಿಂದ ಅಸ್ಪೃಶ್ಯರು ದೇವಸ್ಥಾನ ಹೋಟೆಲ್, ಸಾರ್ವಜನಿಕ ಪ್ರವೇಶ ಅವಕಾಶ ಕಲ್ಪಿಸಲಾಯಿತು.
4) ಜೀತ ಮುಕ್ತ ಕಾಯ್ದೆಯನ್ನು ಜಾರಿಗೆ ತರಲಾಯಿತು.ಎಲ್ಲಾ ವರ್ಗದ ಬಡವರು, SCST OBC ಗಳು.
ಜೀತ ಬಂದನದಿಂದ ಮುಕ್ತಿ ಪಡೆದರು.
5) ವಿಶೇಷ ವಿವಾಹ ಕಾಯಿದೆ ಜಾರಿಗೆ ತಂದು ಅಂತರ್ಜಾತಿ ಮತ್ತು ಅಂತರ್ ಧರ್ಮ ವಿವಾಹಕ್ಕೆ ಅನುಕೂಲ ಮಾಡಿಕೊಡಲಾಯಿತು.
6) ಇನಾಮ್ ಅಬೋಲಿಷನ್ ಆಕ್ಟ್ ತಿದ್ದುಪಡಿ ಮಾಡಲಾಯಿತು. ಇದರಿಂದ ಅನೇಕ SCST , OBC ಜನರು ಜಮೀನಿನ ಮಾಲೀಕರಾಗಲು ಅನುಕೂಲವಾಯಿತು.
7) SCST ನೌಕರರಿಗೆ ಬಡ್ತಿ ಆದೇಶ ಮಾಡಲಾಯಿತು.ಲಕ್ಷಾಂತರ SCST ನೌಕರರು ಉನ್ನತ ಸ್ಥಾನಕ್ಕೆ ಬರುವಂತಾಯಿತು.
8) land sealing ಜಾರಿಗೆ ತರಲಾಯಿತು. ಇದರಿಂದ ಅನೇಕ ಶ್ರೀಮಂತರ ಮತ್ತು land Lords ರವರುಗಳ ಜಮೀನು ಬಡವರ ಪಾಲಾಯಿತು. ಇಂತಹ ಜಮೀನು ವಿವಾದಗಳು ನ್ಯಾಯಲಯಕ್ಕೆ ಹೋಗದೆ ಜನರ ಮಧ್ಯೆ ಬಗೆಹರಿಸಲು
ಭೂ ನಾಯಮಂಡಳಿ ಸ್ಥಾಪನೆ ಮಾಡಲಾಯಿತು.
9) ಕರ್ನಾಟಕ ಮಾಹಿತಿ ಆಯೋಗ ಸ್ಥಾಪನೆ. ಪ್ರತಿಯೊಬ್ಬ ನಾಗರಿಕರಿಗೂ ಮಾಹಿತಿಯನ್ನು ಪಡೆಯಲು ಹಕ್ಕು ಬಂದಂತಾಯಿತು.
10) ಊಳುವವನೆ ಹೊಲದ ಒಡೆಯ ಎಂಬ ಕಾನೂನು ಜಾರಿಯಿಂದ ಅನೇಕ ಬಡವರ ಮತ್ತು ಎಸ್ಸಿ ಎಸ್ಟಿ, ಒಬಿಸಿ ಜನರು ಜಮೀನಿನ ಮಾಲೀಕರಾದರು
11) ಸಮಾನ ವೇತನ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದರಿಂದ ಮಹಿಳೆಯರು ಸಹ ಸರಿ ಸಮಾನವಾಗಿ ಸಂಬಳವನ್ನು ಪಡೆಯುವಂತಾಯಿತು.
12) ಸೋಶಿಯಲ್ ಡಿಸಬಿಲಿಟಿ, ಫಿಸಿಕಲ್ ಹ್ಯಾಂಡಿ ಕ್ಯಾಪಿಟಲ್ ಆಕ್ಟ್, ಪ್ರೆಗ್ನನ್ಸಿ ಆಕ್ಟ್, ಕನಿಷ್ಠ ವೇತನ ಕಾಯ್ದೆ, ಮತ್ತು ಇನ್ನೂ ಅನೇಕ ಕಾಯ್ದೆಗಳ ತಿದ್ದುಪಡಿ ಸಹ ಮಾಡಲಾಯಿತು.
ಈ ಕ್ರಮಗಳಿಂದ ಬಡವರಿಗೆ ರೈತರಿಗೆ ಸಣ್ಣ ರೈತರಿಗೆ ಕಾರ್ಮಿಕರಿಗೆ ಮಹಿಳೆಯರಿಗೆ SCST , OBC ಅನುಕೂಲ ಆಯ್ತು ಎಂದು ಭಾವಿಸಬಹುದು. ಈ ಸಮಯದಲ್ಲಿ ವಿರೋಧ ಪಕ್ಷದವರಿಗೆ ಮತ್ತು ಶ್ರೀಮಂತರಿಗೆ ತೊಂದರೆಯಾಗಿದ್ದಂತೂ ನಿಜ ಅವರು ಇದನ್ನು ಪ್ರತಿಭಟನೆ ಮಾಡುವುದು ಸಹಜ, ಆದರೆ ಅನುಕೂಲ ಪಡೆದ ಜನ ಸಹ ವಿರೋಧ ಮಾಡಿದ್ದು ಏಕೆ ಎನ್ನುವುದು ಒಂದು ಪ್ರಶ್ನೆಯಾಗಿಯೇ ಉಳಿದಿದೆ.