
ಇಂದೋರ್ (ಮ.ಪ್ರ.): ಮಧ್ಯಪ್ರದೇಶದ ಇಂದೋರ್‌ನ ವಿಜಯನಗರ ಪ್ರದೇಶದಲ್ಲಿ ಪಬ್‌ನಿಂದ ಹೊರಬಂದ ನಂತರ ಕುಡಿದ ಮತ್ತಿನಲ್ಲಿ ಯುವತಿಯರು ಹೊಡೆದಾಡಿದ ಪ್ರಕರಣವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಮೇ 18ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನೇಹಾ ಮತ್ತು ಬುಲ್ಬುಲ್ ಎಂಬ ಇಬ್ಬರು ಯುವತಿಯರು ರಾತ್ರಿ 12:15ರ ಸುಮಾರಿಗೆ ಪಾರ್ಟಿಯಿಂದ ಕ್ಲಬ್‌ನಿಂದ ಹೊರಬರುತ್ತಿದ್ದ ವೇಳೆ, ಮೂವರು ಯುವಕರು ಮತ್ತು ಒಬ್ಬ ಯುವತಿ ಇದ್ದ ಗುಂಪು ಅವರ ಹಿಂದೆ ಹೋಗುತ್ತಿತ್ತು. ಈ ವೇಳೆ, ಗುಂಪಿನಲ್ಲಿ ಇದ್ದ ಯುವಕನೊಬ್ಬ ನೇಹಾಳ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದರೆಂದು ಆರೋಪಿಸಲಾಗಿದೆ.ಆ ಕಾಮೆಂಟ್‌ಗೆ ಪ್ರತಿಯಾಗಿ ನೇಹಾ ಆ ಯುವಕನನ್ನು ಎಚ್ಚರಿಸಿದ್ದರು. ಆದರೆ ಪಬ್‌ನ ಸೈಡ್ ಗೇಟ್‌ಗೆ ತಲುಪುವಷ್ಟರಲ್ಲಿ ಆ ಗುಂಪು ಅವರ ಮೇಲೆ ಮತ್ತೆ ಅಸಭ್ಯ ಶಬ್ದಗಳಿಂದ ನಿಂದನೆ ನಡೆಸಿತು. ಇದರೊಂದಿಗೆ ದೈಹಿಕವಾಗಿ ದಾಳಿ ನಡೆಸಿ, ಪಂಚ್ ಮತ್ತು ಕಪಾಳಮೋಕ್ಷ ಮಾಡಿದಿದ್ದಾರೆ. ನೇಹಾ ಮತ್ತು ಬುಲ್ಬುಲ್ ಕೂಡ ಆಕ್ರೋಶದಿಂದ ಪ್ರತಿರೋಧ ತೋರಿದಾಗ, ಯುವತಿಯರ ಗುಂಪು ಕೂಡ ಹಸ್ತಕ್ಷೇಪಿಸಿ, ತೀವ್ರ ಗಲಾಟೆ ನಡೆದಿದೆ. ಜಗಳದ ದೃಶ್ಯಗಳು ಅಲ್ಲಿದ್ದ ಕೆಲವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ದಾಳಿ ನಡೆಸಿದವರನ್ನು ಗುರುತಿಸಲು ಹಾಗೂ ಹೆಚ್ಚಿನ ತನಿಖೆ ನಡೆಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.