

ವಿಟ್ಲ: ಇಂದು ಎಲ್ಲಾ ಸಮಾರಂಭಗಳಲ್ಲಿ ಡ್ರೋನ್ ಬಳಕೆ ಸಾಮಾನ್ಯ ಬೆಳವಣಿಗೆಯಾದರೂ ವಿಟ್ಲ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವದಲ್ಲಿ ಡ್ರೋನ್ ನಿಯಂತ್ರಣ ತಪ್ಪಿ ಉತ್ಸವ ಮೂರ್ತಿಯ ಸಮೀಪಕ್ಕೆ ಬಂದು ಅಪಾಯಕ್ಕೆ ಕಾರಣವಾಯಿತು.
ಅಪಘಾತದ ವಿವರ:
ರಥ ಎತ್ತುವ ವೇಳೆ ವಿಡಿಯೋ ಚಿತ್ರೀಕರಣ ಮಾಡಲು ಹಾರಾಟ ನಡೆಸುತ್ತಿದ್ದ ಡ್ರೋನ್ ರಥದ ಹತ್ತಿರ ಬಂದು ಅಲ್ಲಿ ನಿಂತಿದ್ದ ಅರ್ಚಕರ ತಲೆಗೆ ಬಡಿದಿದೆ. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಪೂಜಾರಿ ಗಾಬರಿಯಾದರೂ ಮೂರ್ತಿಯನ್ನು ಸುರಕ್ಷಿತವಾಗಿ ಹಿಡಿದುಕೊಂಡು ಅಪಾಯವನ್ನು ತಪ್ಪಿಸಿದರು.
ಭಕ್ತರ ಆಕ್ರೋಶ:
ಡ್ರೋನ್ ಸ್ವಲ್ಪ ತಪ್ಪಿದರೆ, ದೇವರ ವಿಗ್ರಹವು ಕೆಳಗೆ ಬೀಳಬಹುದಿತ್ತು. ಅಪಘಾತದ ಹಿನ್ನೆಲೆಯಲ್ಲಿ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಡ್ರೋನ್ ಆಪರೇಟರ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರ ಪ್ರಕಾರ, ದೇವರ ಕಾರ್ಯಕ್ರಮದ ಸಮಯದಲ್ಲಿ ಡ್ರೋನ್ ಬಳಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು