
ಕುಂಬಳಕಾಯಿ ಪೌಷ್ಠಿಕಾಂಶದಲ್ಲಿ ಸಮೃದ್ಧವಾಗಿರುವ ತರಕಾರಿಯಾಗಿದೆ. ಪೌಷ್ಟಿಕತಜ್ಞರ ಪ್ರಕಾರ, ಇದರ ಜ್ಯೂಸ್ ಆರೋಗ್ಯಕ್ಕೆ ತುಂಬಾ ಲಾಭಕಾರಿ. ಕುಂಬಳಕಾಯಿ ರಸದಲ್ಲಿ ವಿಟಮಿನ್ A ಮತ್ತು C ಅಧಿಕವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ, ಕೆಮ್ಮು ಹಾಗೂ ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಈ ರಸ ಕಡಿಮೆ ಕ್ಯಾಲೊರಿಗಳು, ಹೆಚ್ಚು ಫೈಬರ್ ಹೊಂದಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದ್ದು, ಹೊಟ್ಟೆ ಉರಿಯೂತ ಹಾಗೂ ಅಜೀರ್ಣ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಅಲ್ಲದೆ, ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದ್ದು, ಚರ್ಮವನ್ನು ಹೈಡ್ರೇಟ್ ಮಾಡಿ, ಸುಕ್ಕುಗಳು ಮತ್ತು ಕಲೆಗಳನ್ನು ತಡೆಯುತ್ತದೆ.

ಪೊಟ್ಯಾಸಿಯಮ್ ಅಧಿಕವಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನು ಬೆಳಿಗ್ಗೆ ಸೇವಿಸಿದರೆ ದೇಹ ಶುದ್ಧಗೊಳ್ಳುತ್ತದೆ. ತೂಕ ಇಳಿಸಲು ಬಯಸುವವರು ಖಂಡಿತ ಪ್ರಯತ್ನಿಸಬಹುದು!