spot_img

ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜು 38 ನೇ ವಿದ್ಯಾರ್ಥಿ ಪರಿಷತ್ ಉದ್ಘಾಟನೆ.

Date:

spot_img

ನಿಟ್ಟೆ : ದಿನಾಂಕ 05-08-2025 ರ ಮಂಗಳವಾರದಂದು ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜು ನಿಟ್ಟೆ ಇದರ 38ನೇ ವಿದ್ಯಾರ್ಥಿ ಪರಿಷತ್ ಅನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ಸಹಯೋಗಗಳ ನಿರ್ದೇಶಕರಾದ ಪ್ರೋ. ಹರೀಕೃಷ್ಣ ಭಟ್ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೋ. ಹರೀಕೃಷ್ಣ ಭಟ್ ವಿದ್ಯಾರ್ಥಿಗಳು ಮಹತ್ವಾಕಾಂಕ್ಷಿಗಳಾಗಿರಬೇಕು ಹಾಗೂ ಗುರಿ ಮುಟ್ಟುವ ಹಸಿವಿರಬೇಕು ಆಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು. ಜಾಗತಿಕವಾಗಿ ಇಳಿಕೆಯಾಗುತ್ತಿರುವ ಯುವಜನತೆಯ ಪ್ರಮಾಣವು ಭಾರತೀಯ ಯುವಜನತೆಗೆ ವಿಫುಲವಾದ ಉದ್ಯೋಗ ಅವಕಾಶವನ್ನು ಒದಗಿಸಿಕೊಡುತ್ತಿದೆ , ಅದನ್ನು ವಿದ್ಯಾರ್ಥಿಗಳು ಬಳಸಿಕೊಂಡು ವಿದೇಶಗಳಲ್ಲಿ ಉದ್ಯೋಗವನ್ನು ಪಡೆಯಬೇಕು ಎಂದು ತಿಳಿಸಿದರು, ಜೊತೆಗೆ ಜಪಾನ್ ಅಲ್ಲಿನ ಉಧ್ಯಮಶೀಲತೆ ಮತ್ತು ಔಧ್ಯೋಗಿಕ ಮಾನಸಿಕತೆಯ ಬಗ್ಗೆ ಪರಿಚಯಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಅರ್ಥ ಮೀಡಿಯ ಗ್ರೂಪ್ ನ ನಿರ್ದೇಶಕ ಶ್ರೀ ಪ್ರಶಾಂತ್ ಎನ್ ಶೆಟ್ಟಿ ಮಾತನಾಡಿ ಭಾರತವನ್ನು ಸಶಕ್ತಗೊಳಿಸಿವ ಶಕ್ತಿ ನಮ್ಮ ಯುವಜನತೆಯ ಕೈಯಲ್ಲಿದೆ. ಹೇಗೆ ಅಮೇರಿಕಾವನ್ನು ಅಲ್ಲಿಯ ದೈತ್ಯ ಕಂಪೆನಿಗಳು ರೂಪಿಸಿದವೋ ಅದೇ ಮಾದರಿಯಲ್ಲಿ ಭಾರತವೂ ಸಾಗಬೇಕು ಆಗ ಮಾತ್ರ ದೇಶ ಅಭಿವೃದ್ದಿಹೊಂದಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಾ.ವೀಣಾ ಕುಮಾರಿ ಬಿ.ಕೆ ಮಾತನಾಡಿ ವಿದ್ಯಾರ್ಥಿಗಳು ನಾವು ನಮ್ಮ ಕನಸುಗಳನ್ನು ಬೆನ್ನು ಹತ್ತಬೇಕು, ಹಾಗೂ ಸತತ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸಬೇಕು, ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ದಿಗೆ ಕಾಲೇಜು ಸದಾ ಬೆಂಬಲವಾಗಿ ನಿಲ್ಲುತ್ತದೆ ಅದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ತಿಳಿಸಿದರು, ಹಾಗೆಯೇ ವಿದ್ಯಾರ್ಥಿಗಳು ತಾವು ಬೆಳೆಯುತ್ತಲೇ ಸಾಮಾಜಿಕ ಕಳಕಳಿ, ಆಸ್ಥೆಗಳನ್ನು ಬೆಳಿಸಿಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ವಿವಿಧ ಪಠ್ಯೇತರ ಚಟುವಟಿಕೆಗಳ ಸಂಘಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಪ್ರತಿಜ್ಞಾ ವಿಧಿ ಭೋದಿಸಿದರು, ವಿದ್ಯಾರ್ಥಿ ಪರಿಷತ್ ಕಾರ್ಯದರ್ಷಿ ಶ್ರೀ ಶ್ರೀವತ್ಸ ಭಟ್ ವಿದ್ಯಾರ್ಥಿ ಪರಿಷತ್ ನ ವಾರ್ಷಿಕ ಯೋಜನೆಗಳನ್ನು ಪ್ರಸ್ತಾವಿಸಿದರು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀಮತಿ ಸುಮನ ಎಂ ಕೆ ಅಥಿತಿಗಳನ್ನು ಸ್ವಾಗತಿಸಿದರು, ವಿದ್ಯಾರ್ಥಿ ಪರಿಷತ್ ಸಂಯೋಜಕಿ ಶ್ರೀಮತಿ ರೇಖಾ ವಂದಿಸಿದರು, ಐಕ್ಯೂಎಸಿ ಸಂಯೋಜಕ ಶ್ರೀ ಪ್ರಕಾಶ್ ಮತ್ತು ವಿದ್ಯಾರ್ಥಿ ಪರಿಷತ್ ಸಂಯೋಜಕಿ ಶ್ರೀಮತಿ ಮಾಲಿನಿ ಜೆ ರಾವ್ ವೇದಿಕೆಯಲ್ಲಿಉಪಸ್ಥಿತರಿದ್ದರು. ವಿದ್ಯಾರ್ಥಿ ಕು. ವಿಷಾಕ್ ವಿ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವೃತ್ತಿಪರ ಇಂಜಿನಿಯರ್ಗಳ ದಿನ

ಈ ದಿನವನ್ನು ಇಂಜಿನಿಯರ್ಗಳ ಅನ್ವೇಷಣೆ, ಸಾಧನೆ ಮತ್ತು ಸಮಾಜದ ಪ್ರಗತಿಗೆ ಅವರು ನೀಡುವ ಕೊಡುಗೆಗಳನ್ನು ಗೌರವಿಸಲು ನಿಗದಿಪಡಿಸಲಾಗಿದೆ

ಪ್ರೋಟಾನ್‌ನಿಂದ ‘ಲುಮೋ’ AI ಚಾಟ್‌ಬಾಟ್ ಬಿಡುಗಡೆ

ಸುರಕ್ಷಿತ ಇಮೇಲ್ ಮತ್ತು ವಿಪಿಎನ್‌ ಸೇವೆಗಳಿಗೆ ಹೆಸರುವಾಸಿಯಾಗಿರುವ ಪ್ರೋಟಾನ್ ಕಂಪನಿಯು, ಹೊಸ ಎಐ ಚಾಟ್‌ಬಾಟ್ ಒಂದನ್ನು ಬಿಡುಗಡೆ ಮಾಡಿದೆ. ‘ಲುಮೋ’ (Lumo) ಎಂದು ಹೆಸರಿಸಲಾದ ಈ ಚಾಟ್‌ಬಾಟ್ ಅನ್ನು ಗೌಪ್ಯತೆಯನ್ನು ಪ್ರಥಮ ಆದ್ಯತೆಯಾಗಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಹುಲಿಕಲ್ ಘಾಟಿಯಲ್ಲಿ ಮತ್ತೊಮ್ಮೆ ಭಾರೀ ಕುಸಿತ; ಶೀಘ್ರವೇ ಬೃಹತ್ ವಾಹನಗಳ ಸಂಚಾರ ನಿಷೇಧ ಸಾಧ್ಯತೆ!

ರಾಜ್ಯದ ಪ್ರಮುಖ ಘಾಟ್‌ಗಳಲ್ಲಿ ಒಂದಾದ ಹುಲಿಕಲ್ ಘಾಟ್ (ಬಾಳೆಬರೆ) ರಸ್ತೆಯಲ್ಲಿ ಮತ್ತೆ ದೊಡ್ಡ ಪ್ರಮಾಣದ ಕುಸಿತ ಸಂಭವಿಸಿದ್ದು, ಇದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಧರ್ಮಸ್ಥಳ ಪ್ರಕರಣ: 11ನೇ ಸ್ಥಳದಲ್ಲಿ ಶೋಧ ವಿಫಲ; 6ನೇ ಸ್ಥಳದ ಅಸ್ಥಿಪಂಜರ ಕೇಸ್ SITಗೆ ವರ್ಗಾವಣೆ!

ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಧರ್ಮಸ್ಥಳ ಪ್ರಕರಣದ ತನಿಖೆ ಮುಂದುವರೆದಿದೆ. ಆದರೆ, ಆಗಸ್ಟ್ 5ರಂದು ನಡೆಸಿದ ಶೋಧಕಾರ್ಯದಲ್ಲಿ ದೂರುದಾರರು ಗುರುತು ಮಾಡಿದ್ದ 11ನೇ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.