
ಪಾಕಿಸ್ತಾನವು ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದರೆ ಭೀಕರ ತಿರುಗೇಟು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಗೆ ಪರಮಾಧಿಕಾರ ನೀಡಿದ್ದಾರೆ.
ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಶ್ಚಿಮ ಗಡಿಗಳ ಸೇನಾ ಕಮಾಂಡರ್‌ಗಳೊಂದಿಗೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ ವೇಳೆ, ಪಾಕಿಸ್ತಾನದಿಂದ ಉಂಟಾಗುವ ಯಾವುದೇ ದಾಳಿಗೆ ದುಪ್ಪಟ್ಟು ತಿರುಗೇಟು ನೀಡುವಂತೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಕಮಾಂಡರ್‌ಗಳಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪೂರ್ಣ ಅಧಿಕಾರವನ್ನೂ ನೀಡಲಾಗಿದೆ.
ಮೇ 10ರಂದು ಭಾರತ ಮತ್ತು ಪಾಕಿಸ್ತಾನ ಡಿಜಿಎಂಒಗಳ ನಡುವೆ ನಡೆದ ಮಾತುಕತೆ ಬಳಿಕ ಕದನ ವಿರಾಮವನ್ನು ಘೋಷಿಸಲಾಗಿತ್ತು. ಆದರೂ ಪಾಕಿಸ್ತಾನ ನಿಯಮವನ್ನು ನಿರಂತರ ಉಲ್ಲಂಘನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯ ತಿರುಗೇಟು ಹೆಚ್ಚು ಕಠಿಣವಾಗಲಿದೆ ಎಂದು ಸೇನೆಯು ಪ್ರಕಟಿಸಿದೆ.