
|| ಶ್ರೀ ರಾಮ ಶ್ರೀ ||
ಉಡುಪಿ ಶ್ರೀಪಲಿಮಾರು ಮಠದಿಂದ ಭಕ್ತರಿಗೆ ಒಂದು ಮಹತ್ತ್ವದ ಆಹ್ವಾನ!
ಜಗದ್ಗುರು ಶ್ರೀಮದಾಚಾರ್ಯರ ಕರಾರ್ಚಿತವಾಗಿ ಶ್ರೀಪಲಿಮಾರುಮಠದ ಪರಂಪರೆಗೆ ದೊರೆತ ಶ್ರೀ ಸೀತಾ ಲಕ್ಷ್ಮಣಾಂಜನೇಯ ಸಮೇತ ಕೋದಂಡಪಾಣಿ ಶ್ರೀರಾಮಚಂದ್ರ ದೇವರಿಗಾಗಿ ಸುವರ್ಣ ಮಂಟಪ ನಿರ್ಮಾಣಕ್ಕೆ ಮಹತ್ವಾಕಾಂಕ್ಷಿ ಯೋಜನೆ ಕೈಗೊಳ್ಳಲಾಗಿದೆ.
ಈ ಪವಿತ್ರ ಸಂಕಲ್ಪದಡಿ ಸುಮಾರು 6 ಕೆಜಿ ಬಂಗಾರ, 25 ಕೆಜಿ ಬೆಳ್ಳಿ ಬಳಸಿ, ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಸುವರ್ಣ ಮಂಟಪ ನಿರ್ಮಿಸಲು ನಿರ್ಧರಿಸಲಾಗಿದೆ.

ಈ ಮಹತ್ಕಾರ್ಯದಲ್ಲಿ ಭಕ್ತಾದಿಗಳ ಸಹಭಾಗಿತ್ವ ಅತೀವ ಅಗತ್ಯವಾಗಿದ್ದು, ಭಗವಂತನ ಅನುಗ್ರಹವನ್ನು ಪಡೆಯುವ ಅಪೂರ್ವ ಅವಕಾಶ ಇದಾಗಿದೆ.
ಅಕ್ಷಯ ತೃತೀಯ ಎಂಬ ವಿಶೇಷ ಸಂದರ್ಭದಲ್ಲಿ ಸುವರ್ಣ ಖರೀದಿ ಮಾಡುವ ಪರಂಪರೆ ಇದ್ದು, ಈ ವರ್ಷ ಖರೀದಿಸುವ ಸುವರ್ಣವನ್ನು ಭಗವಂತನ ಮಂಟಪ ನಿರ್ಮಾಣಕ್ಕಾಗಿ ದಾನಮಾಡುವ ಮೂಲಕ ನಿಜಾರ್ಥದಲ್ಲಿ ಧರ್ಮಸೇವೆಯಲ್ಲಿ ಭಾಗಿಯಾಗುವ ಅನನ್ಯ ಅವಕಾಶ ಸಿಗಲಿದೆ.ನಿಮ್ಮ ಸುವರ್ಣ ದಾನದಿಂದ ಶ್ರೀರಾಮನ ಈ ಪವಿತ್ರ ಕಾರ್ಯ ಪುಷ್ಠಿಯಾಗುತ್ತದೆ. ನಿಮ್ಮಿಂದ ನಿಮ್ಮ ಕುಟುಂಬದ ಭವಿಷ್ಯ ಸುವರ್ಣಮಯವಾಗಬಹುದು.
ಈ ಸುಪ್ರೀತ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಎಂದು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ, ಶ್ರೀಪಲಿಮಾರು ಮಠ, ಉಡುಪಿ ಇದರ ವ್ಯವಸ್ಥಾಪಕರು ಮನವಿ ಮಾಡಿರುತ್ತಾರೆ.