ರಾಜ್ಯ ಬಂದ್ ಗೆ ದ.ಕ ಬಸ್ ಮಾಲಕರ ಬೆಂಬಲವಿಲ್ಲ! ಶನಿವಾರ ನಿತ್ಯದಂತೆ ಬಸ್ ಸಂಚಾರ

Date:

spot_img

ಮಂಗಳೂರು, ಮಾರ್ಚ್.21: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ಖಂಡಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಕನ್ನಡ ಪರ ಸಂಘಟನೆಗಳು ಶನಿವಾರ (ಮಾರ್ಚ್.22) ರಾಜ್ಯ ಬಂದ್ ಗೆ ಕರೆ ನೀಡಿದ್ದರೂ, ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ಮತ್ತು ಕೆನರಾ ಬಸ್ ಮಾಲಕರ ಸಂಘ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಎಲ್ಲಾ ಸಂಘಟನೆಗಳ ಬೇಡಿಕೆಗೆ ನಮ್ಮ ಸಹಾನುಭೂತಿ ಇದೆ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಪರೀಕ್ಷಾ ಕಾಲವೆಂಬ ಕಾರಣದಿಂದ ಶನಿವಾರ ಬಸ್ ಬಂದ್ ಮಾಡುವುದಿಲ್ಲ. ಬಸ್ ಗಳು ಸಾಮಾನ್ಯವಾಗಿ ಓಡಲಿವೆ,” ಎಂದು ದ.ಕ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಜ್ ಪರ್ತಿಪಾಡಿ ತಿಳಿಸಿದ್ದಾರೆ.

ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಕೂಡ “ಬಂದ್ ಗೆ ನಮ್ಮನ್ನು ಕೇಳಿಕೊಂಡಿಲ್ಲ, ಸಾರ್ವಜನಿಕರು ತೊಂದರೆ ಅನುಭವಿಸಬಾರದು ಎಂಬ ಕಾರಣಕ್ಕೆ ನಾವು ಬಸ್ ನಿಲುಗಡೆ ಮಾಡೋಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತದ ಮಾರುಕಟ್ಟೆಗೆ ಕಾಲಿಟ್ಟ ಬೋಟ್‌ನ ಹೊಸ ಪ್ರೀಮಿಯಂ ಹೆಡ್‌ಫೋನ್

ಬೋಟ್ ಕಂಪನಿಯು 80 ಗಂಟೆಗಳ ಬ್ಯಾಟರಿ ಹಾಗೂ 45dB ಹೈಬ್ರಿಡ್ ANC ಬೆಂಬಲಿಸುವ ಪ್ರೀಮಿಯಂ ನಿರ್ವಾಣ ಯುಟೋಪಿಯಾ 2 ಹೆಡ್‌ಫೋನ್ ಭಾರತದಲ್ಲಿ ಬಿಡುಗಡೆ ಮಾಡಿದೆ.

ದಿನ ವಿಶೇಷ – ಆದಾಯ ತೆರಿಗೆ ದಿನ

ಭಾರತದಲ್ಲಿ ಪ್ರತಿ ವರ್ಷ ಜುಲೈ 24 ರಂದು ಆದಾಯ ತೆರಿಗೆ ದಿನವನ್ನು ಆಚರಿಸಲಾಗುತ್ತದೆ. ಇದರ ಇತಿಹಾಸ, ಪ್ರಾಮುಖ್ಯತೆ ಮತ್ತು ITR ಸಲ್ಲಿಕೆಯ ಕುರಿತು ವಿವರ ಇಲ್ಲಿದೆ.

ನಿಮ್ಮ ಅಡುಗೆಮನೆಯಲ್ಲಿರುವ ಈ ಒಂದು ಎಣ್ಣೆ ನೂರಾರು ಕಾಯಿಲೆಗಳಿಗೆ ಮನೆಮದ್ದು: ಕ್ಯಾಸ್ಟರ್ ಆಯಿಲ್ ಬಳಸುವ ಸರಿಯಾದ ವಿಧಾನ ಇಲ್ಲಿದೆ.

ಹರಳೆಣ್ಣೆಯ ಆರೋಗ್ಯಕರ ಪ್ರಯೋಜನಗಳು, ಕೂದಲ ರಕ್ಷಣೆ ಮತ್ತು ಮಲಬದ್ಧತೆಗೆ ಇದನ್ನು ಬಳಸುವ ಸರಿಯಾದ ವಿಧಾನಗಳ ಕುರಿತು ಇಲ್ಲಿದೆ ಪೂರ್ಣ ಮಾಹಿತಿ.

ಉದ್ಯಮಿ ಸಂಪತ್‌ ಶೆಟ್ಟಿಗೆ ಪ್ರತಿಷ್ಠಿತ ಧರ್ಮಯೋಗಿ ಪುರಸ್ಕಾರ

ಗ್ರಾಮೀಣ ಉದ್ಯಮಿ ಮಂದಾರ್ತಿ ಸಂಪತ್ ಶೆಟ್ಟಿ ಅವರಿಗೆ ಮುದ್ರಾಡಿಯಲ್ಲಿ ಧರ್ಮಯೋಗಿ ಸನ್ಮಾನ ಪ್ರಶಸ್ತಿ ಘೋಷಣೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ