ಸಾರ್ವಜನಿಕ‌ ಶ್ರೀ ಗಣೇಶೋತ್ಸವ ಸಮಿತಿಯಿಂದ ಕ್ರೀಡಾ ಪೋತ್ಸಾಹಕ ಸಹಾಯ ಧನ ವಿತರಣೆ

Date:

spot_img

ಕಾರ್ಕಳ : ಸಾರ್ವಜನಿಕ ಶ್ರೀ ಗಣೇಶೋತ್ಸವ ‌ಸಮಿತಿ ಬಸ್ ಸ್ಟ್ಯಾಂಡ್ ಕಾರ್ಕಳ ಇದರ ಲೆಕ್ಕಪತ್ರ ಮಂಡನೆ ಸಭೆಯು ಸ್ಥಾಪಕಾದ್ಯಕ್ಷ ಶುಭದರಾವ್ ಅಧ್ಯಕ್ಷತೆಯಲ್ಲಿ ಅದಿತ್ಯವಾರ ರಾಧಾಕೃಷ್ಣ ಸಭಾ ಭವನದಲ್ಲಿ ನಡೆಯಿತು.

ಕಳೆದ 18 ವರ್ಷಗಳಿಂದ ಗಣೇಶೋತ್ಸವ ಆಚರಣೆಯಿಂದ ಉಳಿಕೆ ಮೊತ್ತದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ, ಶೈಕ್ಷಣಿಕ, ಹಾಗೂ ಕ್ರೀಡಾ ಪ್ರೋತ್ಸಾಹಕ ಸಹಾಯ ಧನವನ್ನು ವಿತರಿಸುತ್ತಾ ಬರುತ್ತಿದ್ದು ಈ ವರ್ಷವೂ ರೂ 50,000 ಸಾವಿರ ಹಣವನ್ನು ಕ್ರೀಡಾ ಪ್ರೋತ್ಸಾಹಕ ಸಹಾಯ ಧನವಾಗಿ ವಿತರಣೆ ಮಾಡಲಾಗುತ್ತಿದೆ. ಪ್ರತಿಭಾವಂತ ಬಡ ಕ್ರೀಡಾಪಟುಗಳಿಗೆ ಈ ಸಹಾಯ ಧನವು ಉಪಯುಕ್ತವಾಗಲಿದೆ ಎಂದು ಶುಭದರಾವ್ ತಿಳಿಸಿದರು.

ಸಮಿತಿ ಸದಸ್ಯರಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವೇದ ಮೂರ್ತಿ ಅತ್ತೂರು ವಾದಿರಾಜ ಆಚಾರ್ಯ ವಿತರಿಸಿದರು. ವಿಶೇಷ ಸೇವಾ ಕಾರ್ಯ ಕೈಕೊಂಡ ನವೀನ್ ರಾವ್, ನಾಗೇಶ್ ಹೆಗ್ಡೆ, ಜ್ಯೋತಿ ಸತೀಶ್, ಆನಂದ್ ನಾಯಕ್, ಮಂಜುನಾಥ್ ಜೋಗಿ ಹಾಗೂ ದ್ರುವ ಕಾಮತ್ ಮೊದಲಾದವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ಸುರೇಶ್ ದೇವಾಡಿಗ, ಉಪಾದ್ಯಕ್ಷರಾದ ರಾಜರಾಮ್ ಕಾಮತ್, ಶಿವಾಜಿ ರಾವ್ ಉಪಸ್ಥಿತರಿದ್ದರು.ಸದಸ್ಯರಾದ ಸುಖೇಶ್ ಕೋಟ್ಯಾನ್ ಸ್ವಾಗತಿಸಿ ಪ್ರಕಾಶ್ ಸಪಲಿಗ ಧನ್ಯವಾದವಿತ್ತರು. ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ನಿರೂಪಿಸಿದರು‌.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಹಿಳೆಯರೇ ಎಚ್ಚರ..! ರಾತ್ರಿ 11 ದಾಟಿದ್ರೂ ನಿದ್ರೆ ಮಾಡಲ್ವಾ? ನಿಮಗಾಗಿ ಕಾಯ್ತಿದೆ ಈ ದೊಡ್ಡ ಕಾಯಿಲೆ

ಮಹಿಳೆಯರು ರಾತ್ರಿ 11 ಗಂಟೆಯೊಳಗೆ ಮಲಗುವುದು ಏಕೆ ಮುಖ್ಯ? ತಡವಾಗಿ ನಿದ್ರಿಸುವುದರಿಂದ ಹಾರ್ಮೋನ್ ಅಸಮತೋಲನ ಮತ್ತು ಸಂತಾನೋತ್ಪತ್ತಿ ಸಮಸ್ಯೆ ಹೇಗೆ ಕಾಡುತ್ತದೆ ಎಂದು ತಿಳಿಯಿರಿ.

ಹೈದರಾಬಾದ್ ಮೀನು ಪ್ರಸಾದಕ್ಕೆ ಹರಿದುಬಂದ ಜನಸಾಗರ

ಹೈದರಾಬಾದ್‌ನಲ್ಲಿ ಅಸ್ತಮಾ ನಿವಾರಣೆಯ ಸಾಂಪ್ರದಾಯಿಕ ಮೀನು ಪ್ರಸಾದ ವಿತರಣೆಗೆ ಲಕ್ಷಾಂತರ ಜನರು ಆಗಮಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಟ ಗಗನ್ ಚಿನ್ನಪ್ಪ ಲವ್ ಸ್ಟೋರಿ ಬ್ರೇಕಪ್ ಸೀಕ್ರೆಟ್ಸ್

ನಟ ಗಗನ್ ಚಿನ್ನಪ್ಪ ತಮ್ಮ ಮೊದಲ ಪ್ರೀತಿಯಲ್ಲಿ ಎದುರಿಸಿದ ವಂಚನೆ ಹಾಗೂ ಆರ್ಥಿಕ ನಷ್ಟದ ಕಹಿಸತ್ಯ ಬಿಚ್ಚಿಟ್ಟಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮೈಸೂರು ದುರಂತ: 2 ಮಕ್ಕಳ ಹತ್ಯೆ ಬಳಿಕ ತಾಯಿ ಆತ್ಮಹತ್ಯೆಗೆ ಯತ್ನ

ಮೈಸೂರಿನಲ್ಲಿ ತಾಯಿ ತನ್ನ 2 ಪುಟ್ಟ ಮಕ್ಕಳನ್ನು ಹತ್ಯೆಗೈದು ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ