spot_img

CATC ಶಿಬಿರದಲ್ಲಿ NCC ಕ್ಯಾಡೆಟ್ ಗಳಿಗೆ ವಿಪತ್ತು ಪರಿಹಾರ ನಿರ್ವಹಣ ಕೌಶಲ ತರಬೇತಿ

Date:

spot_img

ಜೂನ್ 8, 2025 : 21 ಕರ್ನಾಟಕ ಬೆಟಾಲಿಯನ್ NCC ಆಯೋಜಿಸಿದ ಹತ್ತು ದಿನಗಳ ಕಂಬೈನ್ಸ್ ಆನ್ಯುವಲ್ ಟ್ರೈನಿಂಗ್ ಕ್ಯಾಂಪ್ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಪನ್ನಗೊಂಡಿತು. ಈ ತರಬೇತಿ ಶಿಬಿರದಲ್ಲಿ 592 ಎನ್.ಸಿ.ಸಿ ಕ್ಯಾಡೆಟ್ ಗಳು ಭಾಗಹಿಸಿದ್ದು, ಸೇನಾ ತರಬೇತಿ, ಶಿಬಿರ ಜೀವನ, ದೈಹಿಕ ತರಬೇತಿ (ಕಸರತ್ತು), ಫೈರಿಂಗ್, ಅಡೆತಡೆಗಳನ್ನೆದುರಿಸುವ ಕೋರ್ಸಿನ ತರಬೇತಿಯ ಪ್ರಯೋಜನ ಪಡೆದುಕೊಂಡರು.

‘ಯುವ ಆಪದ ಮಿತ್ರ’ ಯೋಜನೆಯಡಿಯಲ್ಲಿ ಜಿಲ್ಲಾ ವಿಪತ್ತು ಪರಿಹಾರ ನಿರ್ವಹಣಾ ಪ್ರಾಧಿಕರ ಪ್ರತಿನಿಧಿಗಳಿಂದ ಆಯ್ದ ಕೆಡೆಟ್ ಗಳಿಗೆ ವಿಪತ್ತು ಪರಿಹಾರ ನಿರ್ವಹಣೆಯ ತರಬೇತಿಯನ್ನು ನೀಡಲಾಯಿತು.

ಮಂಗಳೂರಿನ ಪೋಲಿಸ್ ಕಮಿಷನರ್ (ಆಯುಕ್ತ) ಕಛೇರಿಯ ವತಿಯಿಂದ ಜೂನ್ 5, 2025ರಂದು ನಕ್ರೆಯಲಿರುವ ಫೈರಿಂಗ್ ರೇಂಜ್ ನಲ್ಲಿ “ಸ್ಟನ್ and ಸ್ಮೋಕ್ ಗ್ರೆನೇಡ್ ಫೈರಿಂಗ್” ಮತ್ತು ಗಲಭೆ ನಿಯಂತ್ರಣ ಡ್ರಿಲ್ ಗಳ ನೇರ ಪ್ರಾತ್ಯಕ್ಷತೆಯನ್ನು ಕೂಡಾ ನೀಡಲಾಯಿತು.

CATC ಯನ್ನು ಎನ್.ಸಿ.ಸಿ ಗ್ರೂಪ್ ಪ್ರಧಾನ ಕಛೇರಿ ಮಂಗಳೂರು ಇದರ ಆಶ್ರಯದಲ್ಲಿ ಆಯೋಜಿಸಲಾಗಿದ್ದು, ಮಂಗಳೂರು ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಕ್ಯಾಡೆಟ್ ಗಳೊಂದಿಗೆ ಸಂವಹನ ನಡೆಸಿ, ತರಬೇತಿ ಶಿಬಿರದ ವ್ಯವಸ್ಥೆಯ ಪರಿಶೀಲನೆ ಮಾಡಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸೌಜನ್ಯಾ ಸಹಿತ ಧರ್ಮಸ್ಥಳ ಪ್ರಕರಣಗಳ ನ್ಯಾಯಕ್ಕಾಗಿ ಆಗ್ರಹ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಐಡಿಎಸ್‌ಒ ಪ್ರತಿಭಟನೆ

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿರುವ ಅಪರಾಧ ಪ್ರಕರಣಗಳ ಸಮರ್ಪಕ ತನಿಖೆ ಮತ್ತು ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಧರಣಿ ಹಮ್ಮಿಕೊಂಡಿತ್ತು.

ಹಿರಿಯಡಕ ಬ್ರಾಹ್ಮಣ ಮಹಾಸಭಾದಿಂದ ‘ಆಟಿ ಸಂಭ್ರಮ 2025’

ಬ್ರಾಹ್ಮಣ ಮಹಾಸಭಾ, ಹಿರಿಯಡಕ ಇವರ ವತಿಯಿಂದ ಆಗಸ್ಟ್ 3, 2025 ಭಾನುವಾರದಂದು ಬೆಳಗ್ಗೆ 9 ಗಂಟೆಗೆ ಓಂತಿಬೆಟ್ಟುವಿನ ಶ್ರೀ ಲಕ್ಷ್ಮೀಕೃಪಾ ಕಲ್ಯಾಣಮಂಟಪದಲ್ಲಿ 'ಆಟಿ ಸಂಭ್ರಮ 2025' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮನೆಗೆಲಸದವಳ ಮೇಲೆ ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯದಿಂದ ಕಠಿಣ ಶಿಕ್ಷೆ

ಮನೆಗೆಲಸದವಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ತೀರ್ಮಾನಿಸಿದೆ.

ಗೌರವಧನ ಹೆಚ್ಚಳಕ್ಕೆ ಆಗ್ರಹ: ಆಗಸ್ಟ್ 12 ರಿಂದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನೆ

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ಆಗಸ್ಟ್ 12 ರಿಂದ 14ರ ವರೆಗೆ ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.