spot_img

ಕನ್ನಡದ ಮೈಸೂರು ಸ್ಯಾಂಡಲ್‌ಗೆ ತೆಲುಗು ನಟಿ ರಾಯಭಾರಿಯಾಗಿ ಬೇಕಿತ್ತೇ? ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ ಯದುವೀರ್

Date:

spot_img

ಮೈಸೂರು:ಮೈಸೂರು ಸ್ಯಾಂಡಲ್ ಎನ್ನುವ ಸಂಸ್ಥೆ ಕನ್ನಡಿಗರ ಕಠಿಣ ಪರಿಶ್ರಮದಿಂದ ನಿರ್ಮಾಣವಾದ ಸಂಸ್ಥೆಯಾಗಿದೆ. ಇಂತಹ ಹೆಮ್ಮೆಯ ಸಂಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಕನ್ನಡಿಗರನ್ನೇ ರಾಯಭಾರಿಯಾಗಿ ನೇಮಕ ಮಾಡಬೇಕು” ಎಂದು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.

ತೆಲುಗು ನಟಿ ತಮನ್ನಾ ಬಾಟಿಯಾರನ್ನು ಮೈಸೂರು ಸ್ಯಾಂಡಲ್‌ನ ರಾಯಭಾರಿಯಾಗಿ ಸರ್ಕಾರ ನೇಮಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಸಾಬೂನು ಎಂದ ಕೂಡಲೇ ಹಿರೋಯಿನ್ನೇ ಬೇಕೆಂಬುದು ಸರಿಯಲ್ಲ. ಈ ಉತ್ಪನ್ನಕ್ಕೆ ಲಿಂಗಭೇದದ ಅಗತ್ಯವಿಲ್ಲ. ಕ್ರಿಕೆಟ್ ಆಟಗಾರರು ಅಥವಾ ಒಳ್ಳೆಯ ನಾಯಕ ನಟರೂ ರಾಯಭಾರಿಯಾಗಿ ಸೇವೆ ಸಲ್ಲಿಸಬಹುದಿತ್ತು. ಈ ನಿರ್ಧಾರದಿಂದ ಕನ್ನಡಿಗರನ್ನು ಅವಮಾನಿಸಲಾಗಿದೆ” ಎಂದು ಖಡಕ್ ಟೀಕೆ ಮಾಡಿದ್ದಾರೆ.

ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಯದುವೀರ್ ಅವರನ್ನು ರಾಯಭಾರಿಯಾಗಿ ಮಾಡುವಂತೆ ಅಭಿಯಾನ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್, “ನನಗೆ ವೈಯಕ್ತಿಕವಾಗಿ ರಾಯಭಾರಿಯಾಗುವ ಆಸೆಯಿಲ್ಲ. ರಾಜಮನೆತನವು ವಾಣಿಜ್ಯ ಉದ್ದೇಶಕ್ಕೆ ಸೇವೆ ಮಾಡುವುದಿಲ್ಲ. ನಾವು ಸದಾ ಕನ್ನಡ ಬ್ರಾಂಡ್‌ಗಳ ಹಿತಕ್ಕಾಗಿ ನಿಲ್ಲುತ್ತೇವೆ” ಎಂದು ಸ್ಪಷ್ಟಪಡಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರೋಟಾನ್‌ನಿಂದ ‘ಲುಮೋ’ AI ಚಾಟ್‌ಬಾಟ್ ಬಿಡುಗಡೆ

ಸುರಕ್ಷಿತ ಇಮೇಲ್ ಮತ್ತು ವಿಪಿಎನ್‌ ಸೇವೆಗಳಿಗೆ ಹೆಸರುವಾಸಿಯಾಗಿರುವ ಪ್ರೋಟಾನ್ ಕಂಪನಿಯು, ಹೊಸ ಎಐ ಚಾಟ್‌ಬಾಟ್ ಒಂದನ್ನು ಬಿಡುಗಡೆ ಮಾಡಿದೆ. ‘ಲುಮೋ’ (Lumo) ಎಂದು ಹೆಸರಿಸಲಾದ ಈ ಚಾಟ್‌ಬಾಟ್ ಅನ್ನು ಗೌಪ್ಯತೆಯನ್ನು ಪ್ರಥಮ ಆದ್ಯತೆಯಾಗಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಹುಲಿಕಲ್ ಘಾಟಿಯಲ್ಲಿ ಮತ್ತೊಮ್ಮೆ ಭಾರೀ ಕುಸಿತ; ಶೀಘ್ರವೇ ಬೃಹತ್ ವಾಹನಗಳ ಸಂಚಾರ ನಿಷೇಧ ಸಾಧ್ಯತೆ!

ರಾಜ್ಯದ ಪ್ರಮುಖ ಘಾಟ್‌ಗಳಲ್ಲಿ ಒಂದಾದ ಹುಲಿಕಲ್ ಘಾಟ್ (ಬಾಳೆಬರೆ) ರಸ್ತೆಯಲ್ಲಿ ಮತ್ತೆ ದೊಡ್ಡ ಪ್ರಮಾಣದ ಕುಸಿತ ಸಂಭವಿಸಿದ್ದು, ಇದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಧರ್ಮಸ್ಥಳ ಪ್ರಕರಣ: 11ನೇ ಸ್ಥಳದಲ್ಲಿ ಶೋಧ ವಿಫಲ; 6ನೇ ಸ್ಥಳದ ಅಸ್ಥಿಪಂಜರ ಕೇಸ್ SITಗೆ ವರ್ಗಾವಣೆ!

ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಧರ್ಮಸ್ಥಳ ಪ್ರಕರಣದ ತನಿಖೆ ಮುಂದುವರೆದಿದೆ. ಆದರೆ, ಆಗಸ್ಟ್ 5ರಂದು ನಡೆಸಿದ ಶೋಧಕಾರ್ಯದಲ್ಲಿ ದೂರುದಾರರು ಗುರುತು ಮಾಡಿದ್ದ 11ನೇ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.

ಕಾಂಗ್ರೆಸ್ ಸಿದ್ಧಾಂತ ಜನರಿಗೆ ತಲುಪಿಸಿ: ಯಶಸ್ಸು ತಾತ್ಕಾಲಿಕವಲ್ಲ ಎಂದ ಕಿಮ್ಮನೆ ರತ್ನಾಕರ್

ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವು ಮತ್ತು ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವಂತೆ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.