ಧಾರವಾಡದಲ್ಲಿ ಹತ್ತಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ಮಾಡಿದ ಹುಚ್ಚುನಾಯಿ : 5 ವರ್ಷದ ಬಾಲಕನ ಸ್ಥಿತಿ ಗಂಭೀರ

Date:

spot_img

ಧಾರವಾಡ : ಧಾರವಾಡ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿರಡಿನಗರ ಮತ್ತು ಸಾಧುನಗರ ಪ್ರದೇಶಗಳಲ್ಲಿ ಬುಧವಾರ ಹುಚ್ಚುನಾಯಿಯೊಂದು ಅಟ್ಟಹಾಸ ಮೆರೆದಿದ್ದು, ಹತ್ತಕ್ಕೂ ಹೆಚ್ಚು ಜನರನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಈ ಘಟನೆಯಿಂದ ಸ್ಥಳೀಯ ನಿವಾಸಿಗಳು ತೀವ್ರ ಭಯಭೀತರಾಗಿದ್ದಾರೆ.

ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟ ಮಕ್ಕಳು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರ ಮೇಲೆ ನಾಯಿ ಏಕಾಏಕಿ ದಾಳಿ ನಡೆಸಿದೆ. ಈ ಭೀಕರ ಘಟನೆಯಲ್ಲಿ 5 ವರ್ಷದ ರಶೀದ್ ಎಂಬ ಬಾಲಕನ ಕಿವಿ ಹಾಗೂ ದೇಹದ ವಿವಿಧ ಭಾಗಗಳಿಗೆ ನಾಯಿ ಬಲವಾಗಿ ಕಚ್ಚಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ. ಸದ್ಯ ಬಾಲಕನಿಗೆ ಜಿಲ್ಲಾಸ್ಪತ್ರೆಯ ಐಸಿಯು (ICU) ವಿಭಾಗದಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಗೆ ಒಳಗಾದವರಲ್ಲಿ ಶಿರಡಿನಗರದ ಗಂಗವ್ವ ಉಪ್ಪಾರ, ಮುಮ್ಮಿಗಟ್ಟಿಯ ಲಕ್ಷ್ಮೀ ಮಾದರ ಸೇರಿದಂತೆ ಇತರ 10 ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಯಿಯ ಅತಿರೇಕದ ವರ್ತನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಮುಂದಿನ ಅನಾಹುತ ತಪ್ಪಿಸಲು ಆ ನಾಯಿಯನ್ನು ಹೊಡೆದು ಸಾಯಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಪ್ರ ಸ್ವಉದ್ಯಮ ಯೋಜನೆ: 2 ಲಕ್ಷ ಸಾಲಕ್ಕೆ ಅರ್ಜಿ ಆಹ್ವಾನ!

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸ್ವಉದ್ಯೋಗಕ್ಕೆ ಬಡ್ಡಿ ರಹಿತ/ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ. ಅರ್ಜಿ ಸಲ್ಲಿಸಲು 31-08-2026 ಕೊನೆ ದಿನ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರು ಇಡಿ ದಾಳಿ: ಐಸಿಸ್ ಫಂಡಿಂಗ್ ಆರೋಪದ ಮೇಲೆ 8 ಕಡೆ ಶೋಧ

ಬೆಂಗಳೂರಿನಲ್ಲಿ ಐಸಿಸ್ ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಇಡಿ ಅಧಿಕಾರಿಗಳು 8 ಕಡೆ ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕರ್ನೂಲು ಬಳಿ ಭೀಕರ ಕಾರು ಅಪಘಾತ: ರವಿಚಂದ್ರ ಶೆಟ್ಟಿ ದುರ್ಮರಣ

ಆಂಧ್ರದ ಕರ್ನೂಲು ಬಳಿ ನಡೆದ ಕಾರು ಅಪಘಾತದಲ್ಲಿ ಮಂಗಳೂರಿನ ರವಿಚಂದ್ರ ಶೆಟ್ಟಿ ನಿಧನರಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.