
ಧಾರವಾಡ : ಧಾರವಾಡದಲ್ಲಿ ಆರ್ ಎಸ್ ಎಸ್ ಮುಖಂಡ ಶ್ರೀಶ ಬಳ್ಳಾರಿಯವರ ಮೇಲೆ ನಾಲ್ವರು ಮುಸ್ಲಿಂ ಯುವಕರು ಹಲ್ಲೆ ಮಾಡಿದ ಘಟನೆ ವರದಿಯಾಗಿದೆ. ಈ ಘಟನೆ ಹಳೆಯ ತಹಸೀಲ್ದಾರ್ ಕಚೇರಿ ಓಣಿಯಲ್ಲಿ ತಡರಾತ್ರಿ ನಡೆದಿದೆ.
ಪ್ರಾರಂಭದಲ್ಲಿ, ಶ್ರೀಶ ಬಳ್ಳಾರಿಯವರು ತಮ್ಮ ಮನೆಯ ಮುಂಭಾಗದಲ್ಲಿ , ಸಿಗರೇಟ್ ಸೇದುತ್ತಿದ್ದ ನಾಲ್ವರು ಯುವಕರನ್ನು ದೂರ ಹೋಗಿ ಸಿಗರೇಟ್ ಸೇದಲು ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಯುವಕರು ಬಳ್ಳಾರಿಯವರ ಮನೆಗೆ ನುಗ್ಗಿ, ಕಲ್ಲು ಮತ್ತು ಮರದ ದೊಣ್ಣೆಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಲ್ಲಿ ಬಳ್ಳಾರಿಯವರ ಕೈ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಳ್ಳಾರಿಯವರ ಕುಟುಂಬದ ಸದಸ್ಯರು ಮತ್ತು ಹತ್ತಿರದವರೂ ಕೂಡ ಹಲ್ಲೆಗೆ ತುತ್ತಾಗಿದ್ದಾರೆ.
ಈ ಹಲ್ಲೆಗೆ ಸಂಬಂಧಿಸಿದ ಮಾಹಿತಿ ಪಡೆದ ಧಾರವಾಡ ನಗರ ಪೊಲೀಸ್ ಇಲಾಖೆ, ಘಟನೆಯ ತನಿಖೆ ಕೈಗೊಂಡಿದ್ದಾರೆ. ಸ್ಥಳೀಯ ಕಾರ್ಯಕರ್ತರು ಪೊಲೀಸ್ ಠಾಣೆ ಎದುರಿನಲ್ಲಿ ಜಮಾಯಿಸಿ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲು ಒತ್ತಾಯಿಸಿದ್ದಾರೆ.