
ಆಗಸ್ಟ್ 6, 2025 ರಂದು ಧರ್ಮಸ್ಥಳದ ಪಾಂಗಳ ಕ್ರಾಸ್ ಬಳಿ ನಡೆದ ಅಹಿತಕರ ಘಟನೆಯ ಸಂದರ್ಭದಲ್ಲಿ, ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲೀಸರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿತರಾಗಿದ್ದ ಆರು ವ್ಯಕ್ತಿಗಳಿಗೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ದೊರೆತಿದೆ.
ಘಟನೆಯ ನಂತರ, ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಅ.ಕ್ರ: 47/2025 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿತ್ತು. ಪೋಲೀಸರು ನಡೆಸಿದ ತನಿಖೆಯಲ್ಲಿ, ಈ ಘಟನೆಯಲ್ಲಿ ಭಾಗಿಯಾದ 6 ಆರೋಪಿಗಳನ್ನು ಬಂಧಿಸಲಾಯಿತು.
ಬಂಧಿತರ ವಿವರ ಇಂತಿದೆ:
- ಪದ್ಮಪ್ರಸಾದ್ (32), ಧರ್ಮಸ್ಥಳ ನಿವಾಸಿ
- ಸುಹಾಸ್ (22), ಧರ್ಮಸ್ಥಳ ನಿವಾಸಿ
- ಖಲಂದರ್ ಪುತ್ತುಮೋನು (42), ಉಜಿರೆ ನಿವಾಸಿ
- ಚೇತನ್ (21), ಕಳೆಂಜ ನಿವಾಸಿ
- ಶಶಿಧರ್ (30), ಧರ್ಮಸ್ಥಳ ನಿವಾಸಿ
- ಗುರುಪ್ರಸಾದ್ (19), ಕಳ್ಮಂಜ ನಿವಾಸಿ
ಬಂಧಿತ ಆರೋಪಿಗಳನ್ನು ಆಗಸ್ಟ್ 9, 2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಎಲ್ಲಾ ಆರೋಪಿಗಳ ವಾದವನ್ನು ಆಲಿಸಿ, ಅವರಿಗೆ ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.