
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್( ರಿ. ) ಉಡುಪಿ ತಾಲೂಕು, ಮಣಿಪಾಲ ವಲಯದ ಆತ್ರಾಡಿ ಕಾರ್ಯಕ್ಷೇತ್ರದ ನೇಸರ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರತ್ನಾಕರ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಅತ್ರಾಡಿ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸತ್ಯಾನಂದ ನಾಯಕ್ ಅಧ್ಯಕ್ಷರು ತಾಲೂಕು ಜನಜಾಗೃತಿ ವೇದಿಕೆ ಉಡುಪಿ ಅವರು ನೆರವೇರಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾಕ್ಟರ್ ಅನ್ವಿತಾ ಯು. ಪೌಷ್ಟಿಕ ಪತ್ಯಾಹಾರ ತಜ್ಞರು ಎಸ್. ಡಿ. ಎಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ, ಪರೀಕ ಇವರು ದಿನನಿತ್ಯದ ಜೀವನದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಹತ್ವದ ಬಗ್ಗೆ, ಮಕ್ಕಳ ಬೆಳವಣಿಗೆಗೆ ಪೂರಕ ಆಹಾರಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸುರೇಂದ್ರ ನಾಯ್ಕ್ ಕ್ಷೇತ್ರ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀಮತಿ ಪೂರ್ಣಿಮಾ ಅಧ್ಯಕ್ಷರು ಅತ್ರಾಡಿ ಒಕ್ಕೂಟ, ಶ್ರೀಮತಿ ಸಹನ ಸಂಯೋಜಕಿ ನೇಸರ ಜ್ಞಾನ ವಿಕಾಸ ಕೇಂದ್ರ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಪೂರ್ಣಿಮಾ, ಸ್ವಾಗತವನ್ನು ಕೇಂದ್ರದ ಸದಸ್ಯರಾದ ಸುಮಾ ನಾಯಕ್, ಶಾಂತರವರು ಧನ್ಯವಾದವನ್ನು ನಡೆಸಿಕೊಟ್ಟರು.