
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ. ಸಿ ಟ್ರಸ್ಟ್( ರಿ ) ಉಡುಪಿ ತಾಲೂಕು. ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲ್ಲಿ ಮಣಿಪಾಲ ವಲಯದ ಶಿವಳ್ಳಿ. ಸಿ ಕಾರ್ಯಕ್ಷೇತ್ರದಲ್ಲಿ ಇಂದು ಹೊಲಿಗೆ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗಿರಿಧರ ಆಚಾರ್ಯ ನಗರಸಭಾ ಸದಸ್ಯರು ಕರಂಬಳ್ಳಿ ವಾರ್ಡ್ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಂಕರ ಕುಲಾಲ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಉಡುಪಿ ಇವರು ವಹಿಸಿಕೊಂಡಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ ಹೊಲಿಗೆ ತರಬೇತಿಯು ತುಂಬಾ ಉತ್ತಮ ಕಾರ್ಯಕ್ರಮವಾಗಿದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸುರೇಂದ್ರ ನಾಯ್ಕ್ ಕ್ಷೇತ್ರ ಯೋಜನಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿಸಿ ಟ್ರಸ್ಟ್ ಉಡುಪಿ ತಾಲೂಕು, ಇವರು ಮಾತನಾಡಿ ಪ್ರತಿಯೊಬ್ಬ ಮಹಿಳೆ ಒಂದಲ್ಲ ಒಂದು ಕೌಶಲ್ಯವನ್ನು ಹೊಂದಿರುತ್ತಾಳೆ, ಕೌಶಲ್ಯವನ್ನು ಹೊರಹಾಕಿ ಉತ್ತಮ ಜೀವನ ನಿರ್ವಹಣೆಗೆ ಹೊಲಿಗೆ ತರಬೇತಿಯು ಸಹಕಾರಿಯಾಗಿದೆ ಆಸಕ್ತಿಯಿಂದ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ, ಹೊಲಿಗೆ ಶಿಕ್ಷಕಿ ದಮಯಂತಿ, ಶ್ರೀಮತಿ ಗೋಪಿ ಪೂಜಾರಿ ಅಧ್ಯಕ್ಷರು ಅಶ್ವತ ಕಟ್ಟೆ ಸೇವಾ ಸಮಿತಿ ಮಹಿಳಾ ಮಂಡಳಿ ದೊಡ್ಡನ ಗುಡ್ಡೆ, ಕಿಶೋರ್ ಸದಸ್ಯರು ಅಶ್ವತ ಕಟ್ಟೆ ಸೇವಾ ಸಮಿತಿ ದೊಡ್ಡನ ಗುಡ್ಡೆ, ಆಶಾ ನಾಯ್ಕ್ ಅಧ್ಯಕ್ಷರು ಶಿವಳ್ಳಿ ಸಿ ಒಕ್ಕೂಟ, ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ಪೂರ್ಣಿಮಾ, ಸ್ವಾಗತವನ್ನು ಸೇವಾ ಪ್ರತಿನಿಧಿ ಯಶೋಧ, ಹಾಗೂ ಧನ್ಯವಾದ ಕಾರ್ಯಕ್ರಮವನ್ನು ಸಂಯೋಜಕಿ ಲಲಿತಾರವರು ನಡೆಸಿಕೊಟ್ಟರು.



































