
ಬೆಳ್ತಂಗಡಿ : ಧರ್ಮಸ್ಥಳದ ಅರಣ್ಯದಲ್ಲಿ ಶವಗಳನ್ನು ಹೂತು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ, ಅನಾಮಿಕ ವ್ಯಕ್ತಿ ಗುರುತಿಸಿದ ಪಾಯಿಂಟ್ ನಂಬರ್ 1ರಲ್ಲಿ ದೊರಕಿದ ಡೆಬಿಟ್ ಮತ್ತು ಪಾನ್ ಕಾರ್ಡ್‌ಗಳ ರಹಸ್ಯವನ್ನು ಎಸ್‌ಐಟಿ ಅಧಿಕಾರಿಗಳು ಭೇದಿಸಿದ್ದಾರೆ.
ಪತ್ತೆಯಾದ ಕಾರ್ಡ್‌ಗಳ ಹಿನ್ನೆಲೆ
ಪಾಯಿಂಟ್ ನಂ. 1ರಲ್ಲಿ ಅಗೆತ ಶುರು ಮಾಡಿದಾಗ, ಒಂದು ಡೆಬಿಟ್ ಕಾರ್ಡ್ ಮತ್ತು ಪಾನ್ ಕಾರ್ಡ್ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ, ಪಾನ್ ಕಾರ್ಡ್ ವಾರಿಸುದಾರರು ಅನಾರೋಗ್ಯದಿಂದ ಈಗಾಗಲೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ದೊರಕಿತ್ತು.
ಮೃತ ವ್ಯಕ್ತಿಯ ತಾಯಿಯೇ ಡೆಬಿಟ್ ಕಾರ್ಡ್ ವಾರಸುದಾರರು
ಇದೀಗ ಎಸ್‌ಐಟಿ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಪತ್ತೆಯಾದ ಡೆಬಿಟ್ ಕಾರ್ಡ್ ಮೃತರ ತಾಯಿಯದ್ದಾಗಿದ್ದು, ಆ ಮಹಿಳೆ ಇನ್ನೂ ಜೀವಂತವಾಗಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಮಹಿಳೆಯನ್ನು ಸಂಪರ್ಕಿಸಿ ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಹೊಸ ಮಾಹಿತಿ ಪ್ರಕರಣದ ತನಿಖೆಗೆ ಮತ್ತಷ್ಟು ಪುಷ್ಟಿ ನೀಡಿದೆ.