spot_img

ಧರ್ಮಸ್ಥಳ ಪ್ರಕರಣ: 3 ಸ್ಥಳಗಳಲ್ಲಿಯೂ ಸಿಗದ ಮೃತದೇಹ, ಎಸ್‌ಐಟಿಗೆ ಹೆಚ್ಚಿದ ತಲೆನೋವು!

Date:

spot_img

ಬೆಳ್ತಂಗಡಿ: ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅನಾಮಿಕ ಗುರುತಿಸಿದ 13 ಸ್ಥಳಗಳ ಪೈಕಿ 3ನೇ ಸ್ಥಳದಲ್ಲಿಯೂ ಯಾವುದೇ ಕಳೇಬರ ಪತ್ತೆಯಾಗದಿರುವುದು ಎಸ್‌ಐಟಿ (Special Investigation Team) ಅಧಿಕಾರಿಗಳಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.

ಕಾರ್ಯಾಚರಣೆ ಮುಂದುವರಿಕೆ, ಸಿಗದ ಕುರುಹು

ಜುಲೈ 30 ರಂದು ಎರಡನೇ ಗುರುತು ಮಾಡಿದ ಸ್ಥಳದಲ್ಲಿ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಮೂರನೇ ಗುರುತು ಮಾಡಿದ ಸ್ಥಳದಲ್ಲಿ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಆದರೂ, ಮೃತದೇಹದ ಯಾವುದೇ ಕುರುಹು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಕಾಡಿನಲ್ಲಿ ಸವಾಲುಗಳು, ಹೆಚ್ಚಿದ ಅನುಮಾನಗಳು

ಎಸ್‌ಐಟಿ ಅಧಿಕಾರಿಗಳು ಕಾಡಿನಲ್ಲಿ ಬೀಡುಬಿಟ್ಟಿದ್ದು, ಸೊಳ್ಳೆಗಳ ಕಾಟದಿಂದ ಅಲ್ಲೊಂದು ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾಮಿಕ ವ್ಯಕ್ತಿ ಜುಲೈ 28ರಂದು ಬಹಳ ನಿಖರವಾಗಿ 13 ಸ್ಥಳಗಳನ್ನು ಗುರುತಿಸಿ, ಅಲ್ಲಿ ಶವ ಹೂತು ಹಾಕಿರುವುದಾಗಿ ತಿಳಿಸಿದ್ದನು. ಅದರಂತೆ ಅಷ್ಟೂ ಸ್ಥಳಗಳಿಗೆ ಎ.ಎನ್.ಎಫ್. (Anti-Naxal Force) ಮತ್ತು ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

2019ರಲ್ಲಿ ಬೆಳ್ತಂಗಡಿಗೆ ಪ್ರವಾಹ ಎದುರಾದಾಗ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿ ಹಾನಿಯಾಗಿತ್ತು. ಒಂದು ವೇಳೆ ಅನಾಮಿಕ ಅಲ್ಲಿ ಶವ ಹೂತು ಹಾಕಿದ್ದರೆ, ಅದು ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆಗಳ ಬಗ್ಗೆ ಅನುಮಾನಿಸಲಾಗಿತ್ತು. ಆದರೆ, ಅರಣ್ಯದಲ್ಲಿ ಹೂತು ಹಾಕಿದ ಸ್ಥಳದಲ್ಲೂ ಮೃತದೇಹ ಸಿಗದಿರುವುದು ಪ್ರಕರಣವನ್ನು ಮತ್ತಷ್ಟು ಗೊಂದಲಮಯವಾಗಿಸಿದೆ.

ಮಧ್ಯಾಹ್ನದ ಬಳಿಕದ ಕಾರ್ಯಾಚರಣೆ ಯಾವ ಸ್ವರೂಪ ಪಡೆಯಬಹುದು ಎಂದು ಕಾದು ನೋಡಬೇಕಿದೆ. ಈ 13 ಸ್ಥಳಗಳಲ್ಲದೆ ಇಂತಹ ಇನ್ನೂ 8 ಪ್ರದೇಶಗಳಿವೆ ಎಂದು ಅನಾಮಿಕ ಹೇಳಿದ್ದಾನೆಂಬ ಮಾಹಿತಿಗಳಿದ್ದು, ಇವೆಲ್ಲದರ ಕಾರ್ಯಾಚರಣೆಗೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಡಿಕೇರಿ: ಸಂಪಾಜೆ ಹೆದ್ದಾರಿ ತಡೆಗೋಡೆಯಲ್ಲಿ ಭಾರಿ ಬಿರುಕು; 2018ರ ದುರಂತದ ನೆನಪು, ಜನರ ಸ್ಥಳಾಂತರ

ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ತಡೆಗೋಡೆಯು ಬಿರುಕು ಬಿಟ್ಟಿದೆ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ದೂರುದಾರರು ಗುರುತಿಸಿದ್ದ 6ನೇ ಸ್ಥಳದಲ್ಲಿ ಅಸ್ಥಿಪಂಜರ ಪತ್ತೆ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂತಿಟ್ಟಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಶೇಷ ತನಿಖೆಯು (ಎಸ್.ಐ.ಟಿ) ಮಹತ್ವದ ಹಂತ ತಲುಪಿದೆ.

ರಿಷಬ್ ಶೆಟ್ಟಿಯವರ ಬಹುನಿರೀಕ್ಷಿತ ಹೊಸ ಯೋಜನೆ: ಪೋಸ್ಟರ್ ಲೋಕಾರ್ಪಣೆ, ಅಭಿಮಾನಿಗಳಲ್ಲಿ ಸಮ್ಮಿಶ್ರ ಭಾವನೆಗಳು

"ಕಾಂತಾರ-1" ಚಿತ್ರದ ಬಿಡುಗಡೆಯ ಸಿದ್ಧತೆಗಳಲ್ಲಿ ನಿರತರಾಗಿರುವ ನಟ ಹಾಗೂ ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಅವರು, ತಮ್ಮ ನೂತನ ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಪ್ರಕಟಿಸಿದ್ದಾರೆ

ವಿಶ್ವಕರ್ಮ ಯುವತಿಗೆ ನ್ಯಾಯ: ಸಂತ್ರಸ್ತೆಯ ಸಂಧಾನಕ್ಕೆ ಪ್ರಭಾಕರ್ ಭಟ್, ಕಟೀಲ್ ಮೊರೆ ಹೋದ ವಿಶ್ವಕರ್ಮ ಮಹಾಸಭಾ

ಪುತ್ತೂರು ತಾಲೂಕಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾದ ವಿಶ್ವಕರ್ಮ ಸಮುದಾಯದ ಯುವತಿ ಮತ್ತು ಆಕೆಯ ನವಜಾತ ಶಿಶುವಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷರಾದ ಕೆ.ಪಿ. ನಂಜುಂಡಿ ವಿಶ್ವಕರ್ಮ ಅವರು ಆಗಸ್ಟ್ 1ರ ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.