spot_img

‘ವಿಕಸಿತ ಭಾರತ ಯೂತ್ ಪಾರ್ಲಿಮೆಂಟ್ 2025’ – ಮನು ಶೆಟ್ಟಿ ಆಯ್ಕೆ

Date:

ಭಾರತ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರದ ಸಹಯೋಗದಲ್ಲಿ ನಡೆದ “ವಿಕಸಿತ ಭಾರತ ಯುವ ಪಾರ್ಲಿಮೆಂಟ್ ಸ್ಪರ್ಧೆ”ಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಾರ್ಚ್ 22 ಮತ್ತು 23ರಂದು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ನಡೆದ ಮಂಗಳೂರು, ಕೊಡಗು ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮೂರು ಜಿಲ್ಲೆಗಳ ಸುಮಾರು 150 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಿಮವಾಗಿ 10 ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿದೆ.

ಮಾರ್ಚ್ 27ರಂದು ರಾಜ್ಯ ಮಟ್ಟದ ‘ವಿಕಸಿತ ಭಾರತ ಯುತ್ ಪಾರ್ಲಿಮೆಂಟ್ – 2025’ ಕಾರ್ಯಕ್ರಮವು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯಲಿದೆ.

ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ. ಎಂ ವೆನಿಸ್ಸಾ ಎ.ಸಿ ವಿಜೇತರಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ವಿತರಿಸಿದರು ನೆಹರು ಯುವ ಕೇಂದ್ರದ ನೋಡಲ್ ಅಧಿಕಾರಿ ಲೋಕೇಶ್ ಕುಮಾರ್, ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಂಯೋಜಕ ಡಾ. ಶೇಷಪ್ಪ ಅಮೀನ್ ಮತ್ತು ಸೈಂಟ್ ಆಗ್ನೆಸ್ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಉದಯ್ ಕುಮಾರ್ ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಭೂ ದಿನ

ಭೂಮಿಯನ್ನು ಪ್ರೀತಿಸದೆ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಭೂಮಿಯನ್ನು ಹಾಗೂ ಪರಿಸರವನ್ನು ಪ್ರೀತಿಸಬೇಕು ಎನ್ನುವ ಉದ್ದೇಶದಿಂದ ಪಾಶ್ಚಾತ್ಯರು ಈ ದಿನವನ್ನು ಭೂಮಿಯ ನೆನಪಿನಲ್ಲಿ ಸೀಮಿತವಾಗಿಸಿದ್ದಾರೆ.

ಪೆರ್ವಾಜೆಯಲ್ಲಿ ಚಿರತೆ ಗೋಚರ: ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆತಂಕ

ಪೆರ್ವಾಜೆ ಪ್ರದೇಶದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಹರೀಶ್ ಕುಮಾರ್ ಬೋಲಾ ಅವರ ಮನೆಯ ಮೇಲ್ಛಾವಣಿಗೆ ರಾತ್ರಿ 9 ಗಂಟೆಗೆ ಚಿರತೆ ಕಾಣಿಸಿಕೊಂಡಿದೆ.

ಬೇಸಿಗೆಯ ತಾಪಮಾನದಿಂದ ರಕ್ಷಣೆ: ಈರುಳ್ಳಿಯ ಸೇವನೆಯಿಂದ ಆರೋಗ್ಯದ ಹಲವಾರು ಪ್ರಯೋಜನಗಳು

ಗರಿಷ್ಠ ತಾಪಮಾನದಿಂದ ಜಜ್ಜಿ ಹೋಗುತ್ತಿರುವ ಈ ಬಿಸಿಲು ದಿನಗಳಲ್ಲಿ ಆರೋಗ್ಯವನ್ನು ಕಾಪಾಡುವುದು ಮುಖ್ಯವಾಗಿದೆ. ಈ ಹೊತ್ತಿನಲ್ಲಿ ನಿತ್ಯ ಆಹಾರದಲ್ಲಿ ಸಾಮಾನ್ಯವಾಗಿ ಬಳಸುವ ಈರುಳ್ಳಿ (Onion) ಬಹುಪರಿಣಾಮಕಾರಿ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ.

ವಿವಾಹ ವಾರ್ಷಿಕೋತ್ಸವದ ಫೋಟೋ ವೈರಲ್: ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ವದಂತಿಗಳಿಗೆ ತೆರೆ

ಬಾಲಿವುಡ್‌ನ ತಾರಾ ದಂಪತಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ದಾಂಪತ್ಯ ಸಂಬಂಧದಲ್ಲಿ ಬಿರುಕು ಎನ್ನುವ ವದಂತಿಗಳಿಗೆ ತೆರೆ ಬಿದ್ದಂತಾಗಿದೆ