
ದೆಹಲಿ : ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ಇತ್ಯರ್ಥವಾಗುವ ಮುನ್ನವೇ ದೆಹಲಿಯ ಜ್ಯೋತಿ ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿ ನೇಹಾ ಅವರನ್ನು ಅನ್ಯಕೋಮಿನ ತೌಫಿಕ್ ಎಂಬಾತ ಬುರ್ಖಾ ಧರಿಸಿ ಮನೆಗೆ ನುಗ್ಗಿ ಐದನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾನೆ.
ಉತ್ತರ ಪ್ರದೇಶದ ರಾಂಪುರ್ ಮೂಲದ ತೌಫಿಕ್, ದೆಹಲಿಯ ಮಂಡೋಲಿಯಲ್ಲಿ ಕೆಲಸ ಮಾಡುತ್ತಿದ್ದ. ಮೂರು ವರ್ಷಗಳ ಹಿಂದೆ ನೇಹಾಳ ಪರಿಚಯವಾಗಿದ್ದ ಈತನು, ಆಕೆಯೊಂದಿಗೆ ಸ್ನೇಹ ಬೆಳೆಸಿದ್ದ. ನೇಹಾ ಈತನನ್ನು ಅಣ್ಣ ಎಂದು ಕರೆಯುತ್ತಿದ್ದು, ರಾಖಿ ಕೂಡ ಕಟ್ಟಿದ್ದಳು.
ಆದರೆ ಇತ್ತೀಚೆಗೆ ತೌಫಿಕ್, ನೇಹಾಳನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದ. ನೇಹಾ ಇದನ್ನು ನಿರಾಕರಿಸಿದ್ದಳು: “ನೀನು ನನ್ನ ಅಣ್ಣನಂತೆ, ಮದುವೆ ಸಾಧ್ಯವಿಲ್ಲ” ಎಂದಿದ್ದಳು. ಇದರಿಂದ ಕೆರಳಿದ ತೌಫಿಕ್, “ಒಪ್ಪದಿದ್ದರೆ ಹತ್ಯೆ ಮಾಡುತ್ತೇನೆ” ಎಂಬ ಬೆದರಿಕೆಯೂ ಹಾಕಿದ್ದ.
ಮೊದಲೇ ಹಿಂದೂ ಕಾರ್ಯಕರ್ತೆಯಾಗಿದ್ದ ನೇಹಾ ಇಂತಹ ಬೆದರಿಕೆಗೆಲ್ಲ ತಲೆ ಕೊಡಲು ಹೋಗಲಿಲ್ಲ.. ಬೆದರಿಕೆಗೂ ಜಗ್ಗದಿದ್ದಾಗ ತೌಫಿಕ್ ಬುರ್ಖಾ ಧರಿಸಿ ನೇಹಾಳ ಮನೆಯೊಳಗೆ ನುಗ್ಗಿದ್ದ. ಟೆರೆಸ್‌ನಲ್ಲಿ ನೀರಿನ ಟ್ಯಾಂಕ್ ಬಳಿಯಲ್ಲಿ ಇದ್ದ ನೇಹಾಳ ಜೊತೆ ವಾಗ್ವಾದ ನಡೆದಿದ್ದು, ಆಕೆಯನ್ನು ಐದನೇ ಮಹಡಿಯಿಂದ ಕೆಳಗೆ ತಳ್ಳಿದ. ಗಂಭೀರ ಗಾಯಗೊಂಡಿದ್ದ ನೇಹಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.
ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ, ಪರಾರಿಯಾಗಿದ್ದ ತೌಫಿಕ್ ಅನ್ನು ಯುಪಿಯ ರಾಂಪೂರಿನ ತಾಂಡಾದಿಂದ ಬಂಧಿಸಿದ್ದಾರೆ. ಈ ದಾರುಣ ಪ್ರಕರಣಕ್ಕೆ ರಾಷ್ಟ್ರದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.