
ಕಾರ್ಕಳ : ” ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ, ಕ್ರೀಡಾಪಟುಗಳು ಸೋತರೂ ಗೆದ್ದರೂ ಒಂದೇ ಮನಸ್ಥಿತಿಯನ್ನು ಹೊಂದಿರಬೇಕು. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಕ್ರೀಡಾಪಟುಗಳು ಮನೋರಂಜನೆಗಾಗಿ ಆಡಬೇಕು. ಕ್ರೀಡೆಗಳ ಮೂಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬೇಕು” ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಪದ್ಮನಾಭ ಭಂಡಿಯವರು ಕೆ.ಎಂ.ಇ.ಎಸ್ ವಿದ್ಯಾ ಸಂಸ್ಥೆಯಲ್ಲಿ ನಡೆದ ತಾಲೂಕು ಮಟ್ಟದ ಸಮಾರೋಪ ಸಮಾರಂಭದಲ್ಲಿ ಹೇಳಿದರು.
“ಪಂದ್ಯಾಟದಲ್ಲಿ ಯಾವುದಾದರೂ ಒಂದು ತಂಡ ಗೆಲ್ಲಲೇ ಬೇಕು, ಇನ್ನೊಂದು ತಂಡ ಸೋಲಬೇಕು… ಇಂದಿನ ಪಂದ್ಯಾಟ ಅತ್ಯಂತ ಶಿಸ್ತಿನಿಂದ ನಡೆದಿದೆ, ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಗಳು.” ಎಂದು ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಪಂದ್ಯಾಟದ ಯಶಸ್ಸಿಗೆ ಕಾರಣಕರ್ತರಾದ ದೈಹಿಕ ನಿರ್ದೇಶಕರಾದ ಸತೀಶ್ಚಂದ್ರ ಹೆಗ್ಡೆಯವರನ್ನು ಗೌರವಿಸಲಾಯತು.
ಕೆ.ಎಂ. ಇ. ಎಸ್ ತಂಡವು ದ್ವಿತೀಯ ಸ್ಥಾನವನ್ನು ಮತ್ತು ಸ್ಥಳೀಯ ಎಸ್.ಎನ್.ವಿ ಪದವಿ ಪೂರ್ವ ಕಾಲೇಜು ಹಿರಿಯಂಗಡಿ ತಂಡವು ಪ್ರಥಮ ಸ್ಥಾನ ಪಡೆಯಿತು. ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಎಸ್.ಎನ್.ವಿ ತಂಡ ಮತ್ತು ದ್ವಿತೀಯ ಸ್ಥಾನ ಗಳಿಸಿದ ಕೆ.ಎಮ್. ಇ .ಎಸ್. ತಂಡಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ಅಭಿನಂದನೆಗಳನ್ನು ಸಲ್ಲಿಸಿದರು. ಕಾಲೇಜಿನ ಉಪನ್ಯಾಸಕಿ ನಿವೇದಿತಾ ಕಾರ್ಯಕ್ರಮ ನಿರ್ವಹಿಸಿದರು. ಪ್ರೌಢ ಶಾಲಾ ಮುಖ್ಯಸ್ಥೆ ಶ್ರೀಮತೀ ಮತ್ತು ಪ್ರೈಮರಿ ಶಾಲೆಯ ಮುಖ್ಯಸ್ಥೆ ಲೊಲಿಟಾ ಡಿ’ಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.