ನೃತ್ಯ ಶಿಕ್ಷಕನೊಬ್ಬ ಬೇಸಿಗೆ ಶಿಬಿರದಲ್ಲಿ 2.5 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಘಟನೆ

Date:

spot_img

ಪುಣೆ: ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿ 2.5 ವರ್ಷದ ಬಾಲಕಿಗೆ ಬೇಸಿಗೆ ಶಿಬಿರದ ವೇಳೆ ನೃತ್ಯ ಶಿಕ್ಷಕನೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿತ ಶಿಕ್ಷಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉಲ್ಲಾಸ್‌ನಗರದ ಶಿಬಿರದಲ್ಲಿದ್ದ ಮಗುವಿಗೆ ಶಿಬಿರದಿಂದ ಮನೆಗೆ ವಾಪಸಾದ ಬಳಿಕ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಇದರಿಂದ ಆತಂಕಗೊಂಡ ಪೋಷಕರು ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ . ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿರುವುದು ಸ್ಪಷ್ಟವಾಗಿದೆ.

ಈ ಕುರಿತು ಮಗುವಿನೊಂದಿಗೆ ಮಾತುಕತೆ ನಡೆಸಿದಾಗ, ನೃತ್ಯ ಶಿಕ್ಷಕ ಈ ಕೃತ್ಯ ಎಸಗಿದ್ದಾನೆ ಎಂಬುದು ಪೋಷಕರಿಗೆ ಗೊತ್ತಾಗಿದೆ. ತಕ್ಷಣವೇ ಅವರು ವಿಠಲವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪೊಲೀಸರು ಉಲ್ಲಾಸ್‌ನಗರದ ಡಿಸಿಪಿ ಸಚಿನ್ ಗೋರ್ ಮತ್ತು ಹಿರಿಯ ಅಧಿಕಾರಿ ಅನಿಲ್ ಪಡ್ವಾಲ್ ಅವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಆತನ ಮನೆಯಿಂದ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಈ ಪ್ರಕರಣವು ಶಿಬಿರಗಳಲ್ಲಿ ಭಾಗವಹಿಸುತ್ತಿರುವ ಪುಟಾಣಿ ಮಕ್ಕಳ ಸುರಕ್ಷತೆಗೆ ಗಂಭೀರ ಎಚ್ಚರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚು ನಿಗಾ ವಹಿಸಲು ತಜ್ಞರು ಸಲಹೆ ನೀಡುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ