spot_img

ಆಗಸ್ಟ್ 13ರಂದು ಕ್ರಿಯೇಟಿವ್ ಪುಸ್ತಕಧಾರೆ ಕಾರ್ಯಕ್ರಮ

Date:

spot_img

ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಆಗಸ್ಟ್ 13ರಂದು “ಕ್ರಿಯೇಟಿವ್ ಪುಸ್ತಕ ಧಾರೆ – 2025” ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ… ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಸಮಾರಂಭ ಜರುಗಲಿರುವುದು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಿತ್ರ ನಿರ್ದೇಶಕರು ಹಾಗೂ ಖ್ಯಾತ ಸಾಹಿತಿಗಳಾದ ಡಾ. ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಆಗಮಿಸಲಿದ್ದಾರೆ. ಜೊತೆಗೆ ಶ್ರೀ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಸಾಹಿತಿಗಳು ಮತ್ತು ಅಧ್ಯಕ್ಷರು, ಕ.ಸಾ.ಪ ಕಾರ್ಕಳ ತಾಲೂಕು, ಡಾ. ಪ್ರದೀಪಕುಮಾರ ಹೆಬ್ರಿ, ಮಹಾಕಾವ್ಯಗಳ ಲೇಖಕರು, ಮಂಡ್ಯ, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು ಘನ ಉಪಸ್ಥಿತಿ ವಹಿಸಲಿದ್ದಾರೆ.

ಅನಾವರಣಗೊಳ್ಳಲಿರುವ ಕೃತಿಗಳು

• ಯಾತ್ರೆ – ಚಂದ್ರಕಾಂತ ಪೋಕಳೆ
• ವಿಜ್ಞಾನ ಕೌತುಕಗಳ ಮಹಾಯಾನ – ಎಲ್.ಪಿ ಕುಲಕರ್ಣಿ
• ಹರ್ಷ ರಾಗ – ಪೌಝಿಯಾ ಸಲೀಂ
• ಹಿತಶತ್ರು – ಪದ್ಮಲತಾ ಮೋಹನ್
• ಪುಟ್ಟ ದೇವರ ಕಣ್ಣೀರು – ಸದಾಶಿವ ಸೊರಟೂರು
• ಬದುಕು ಮಾಯೆಯ ಮಾಟ – ಕುಮಾರಸ್ವಾಮಿ ತೆಕ್ಕುಂಜ
• ಕಾವ್ಯ ಧ್ಯಾನ – ನಾಗೇಶ್ ಜೆ. ನಾಯಕ
• ನಿನಗೆ ನೀನೇ ಬೆಳಕು – ಪ್ರಜ್ವಲಾ ಶೆಣೈ
• ನಿನ್ನ ಇಚ್ಛೆಯಂತೆ ನಡೆವೆ – ಮನು ಗುರುಸ್ವಾಮಿ
• ಕಣ್ಣ ಬಾಗಿಲಿಗೆ ಬಂದ ನೀರು – ಸಂತೆಬೆನ್ನೂರು ಫೈಜ್ನಟರಾಜ್
• ಸ್ವಾತಿ ಬೊಂಬಾಟ್ – ಎಂ. ಮನೋಹರ ಪೈ
• ಗ್ಯಾಂಗ್ ಸ್ಟರ್ ಮತ್ತು ಅವಳು – ಮಂಜುನಾಥ್ ಕುಂಬಾರ್
• ಇದೊಳ್ಳೆ ವರಸೆ – ಸಂದೇಶ್ ಎಚ್. ನಾಯ್ಕ್
• ಮಾಂಡವ್ಯ ದೀಪ – ಡಾ. ಪ್ರದೀಪ ಕುಮಾರ ಹೆಬ್ರಿ
• ಬೆಳ್ದೀಪ – ಡಾ. ಪ್ರದೀಪ ಕುಮಾರ ಹೆಬ್ರಿ
• ನಿಲುಕದ ನಕ್ಷತ್ರ – ಡಾ. ಸುಮತಿ ಪಿ.
• ಸಿಹಿಜೀವಿ ಕಂಡ ಅಂಡಮಾನ್ – ಸಿಹಿಜೀವಿ ಸಿ.ಜಿ ವೆಂಕಟೇಶ್ವರ
• ಅನುಭವ ದೀಪ್ತಿ – ಶುಭಲಕ್ಷ್ಮಿ ಆರ್. ನಾಯಕ್
• ಈ ಪಯಣದಲ್ಲಿ –
ಶ್ಯಾಮಲಾ ಗೋಪಿನಾಥ್
• ಸಂಗೀತ ಶರಧಿ –
ರಾಜೇಂದ್ರ ಭಟ್. ಕೆ.
• ಅಸಂಗತ – ಅಕ್ಷತಾ ರಾಜ್ ಪೆರ್ಲ
• ವಿಜ್ಞಾನ ವಿಶಾರದರು – ಎಲ್‌.ಪಿ ಕುಲಕರ್ಣಿ

ಸಂವಾದ ಕಾರ್ಯಕ್ರಮ

ಅಪರಾಹ್ನ 2.00 ರಿಂದ 3.20 ರ ವರೆಗೆ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ಚಲನಚಿತ್ರಗಳಲ್ಲಿ ಬಳಸಿರುವ ಭಾವಗೀತೆಗಳ ಗಾಯನದ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಲಿರುವುದು. ಖ್ಯಾತ ನಿರೂಪಕರಾದ ಶ್ರೀ ಅವಿನಾಶ್ ಕಾಮತ್ ರವರು ಸಂವಾದ ಕಾರ್ಯಕ್ರಮ ನಿರ್ವಹಿಸಿಕೊಡಲಿದ್ದಾರೆ. ಜೀ ಸರಿಗಮಪ ಮತ್ತು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಖ್ಯಾತಿಯ ಶ್ರೀ ಯಶವಂತ್ ಎಂ.ಜಿ ಇವರಿಂದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿರುವುದು. ನವೀನತೆಯೊಂದಿಗೆ ಸೃಜನಾತ್ಮಕತೆಯನ್ನು ಸೃಷ್ಟಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನವು ಈಗಾಗಲೇ ರಾಜ್ಯ ವ್ಯಾಪಿ ಪ್ರಸಿದ್ಧಿ ಗಳಿಸಿದ್ದು, ಇಂತಹ ಹಲವಾರು ಕಾರ್ಯಕ್ರಮಗಳ ಮೂಲಕ ಕ್ರಿಯೇಟಿವ್ ಎಲ್ಲರ ಮನೆಮಾತಾಗಿದೆ. ಆಗಸ್ಟ್ 13ರಂದು ನಡೆಯುವ ಪುಸ್ತಕಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೂ ಮುಕ್ತ ಅವಕಾಶವಿದ್ದು ಸಾಹಿತ್ಯಾಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ಜೈವಿಕ ಇಂಧನ ದಿನಾಚರಣೆ

ಪ್ರತಿ ವರ್ಷ ಆಗಸ್ಟ್ 10ರಂದು ವಿಶ್ವ ಜೈವಿಕ ಇಂಧನ ದಿನ (World Biofuel Day) ವನ್ನು ಆಚರಿಸಲಾಗುತ್ತದೆ. ಪೆಟ್ರೋಲಿಯಂ ಮೂಲದ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಮತ್ತು ನವೀಕರಿಸಬಹುದಾದ ಇಂಧನಗಳ ಬಗ್ಗೆ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ

ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುತ್ತೀರಾ?: ಇಲ್ಲಿದೆ ಆರೋಗ್ಯ ತಜ್ಞರ ಅಭಿಪ್ರಾಯ

ಆರೋಗ್ಯ ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಕೆಲವರಿಗೆ ಪ್ರಯೋಜನವಾದರೆ, ಇನ್ನು ಕೆಲವರಿಗೆ ತೊಂದರೆ ಉಂಟಾಗಬಹುದು.

ಭಾರತದ ವಾಹನ ಮಾರುಕಟ್ಟೆಗೆ ಕ್ವಾಲ್ಕಾಮ್‌ನ ‘ಡಿಜಿಟಲ್ ಚಾಸಿಸ್’: ಸ್ಮಾರ್ಟ್‌ ಕಾರ್‌ಗಳು ಇನ್ನಷ್ಟು ಸುರಕ್ಷಿತ

ಕ್ವಾಲ್ಕಾಮ್ ತನ್ನ ಸ್ನಾಪ್‌ಡ್ರಾಗನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಭಾರತದ ವಾಹನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.

ವೀರೇಂದ್ರ ಹೆಗ್ಗಡೆಯವರ ಒಳ್ಳೆ ಕೆಲಸ ಕಾಣಿಸುತ್ತಿಲ್ಲವೇ?: ಅಪಪ್ರಚಾರದ ವಿರುದ್ಧ ವಚನಾನಂದ ಶ್ರೀಗಳ ಆಕ್ರೋಶ

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಹಾವೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಪರವಾಗಿ ಪ್ರಬಲವಾಗಿ ಮಾತನಾಡಿದರು.