spot_img

ಸಿ ಎ ಫೌಂಡೇಶನ್ ಫಲಿತಾಂಶದಲ್ಲೂ ಮುಂಚೂಣಿಯಲ್ಲಿರುವ ಕ್ರಿಯೇಟಿವ್ ಪಿಯು ಕಾಲೇಜು

Date:

spot_img

ಕಾರ್ಕಳ : ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿ ಎ ಫೌಂಡೇಶನ್ ಫಲಿತಾಂಶವು 06 ಜುಲೈ 2025 ರಂದು ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳಾದ ಪೂರ್ಣ ಭಟ್ ಕೆ.ಎಲ್, ಸೃಜನ್ ಎಸ್. ಭಟ್, ಅಪ್ಸರ್ ಫಾಹಿಮ್, ಬಸವ ಪ್ರಸಾದ್ ಕಾಜಿ, ಪ್ರಭವ ಗೋಪಾಲ್ ಶೆಟ್ಟಿ, ಸೌರವ್ ರವಿ ಶೇಟ್, ಆರ್ಯ ಬಿ.ವಿ, ಹೆಗ್ಡೆ ಪ್ರತಿಕ್, ಶ್ರದ್ಧಾ ಪ್ರಕಾಶ್ ಅಂಗಡಿ, ರೇಷ್ಮೆ ಜಿ.ಕೆ, ಶ್ರೀಕಾರ್ ದುಬೀರ ರವರು ಕ್ರಮವಾಗಿ 264, 249, 238, 238, 233, 225, 212, 212, 210, 204, 202, ಅಂಕಗಳನ್ನು ಗಳಿಸುವುದರ ಮೂಲಕ ಅರ್ಹತೆಯನ್ನು ಗಳಿಸಿಕೊಂಡಿರುತ್ತಾರೆ.

ಪರೀಕ್ಷೆ ಬರೆದಿರುವ 20 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಅರ್ಹತೆಯನ್ನು ಗಳಿಸಿರುತ್ತಾರೆ. ರಾಷ್ಟ್ರೀಯ ಮಟ್ಟದ ಒಟ್ಟು ಫಲಿತಾಂಶದಲ್ಲಿ 15% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ಕ್ರಿಯೇಟಿವ್ ವಿದ್ಯಾ ಸಂಸ್ಥೆಯಲ್ಲಿ ಪರೀಕ್ಷೆ ತೆಗೆದುಕೊಂಡ ಒಟ್ಟು ವಿದ್ಯಾರ್ಥಿಗಳಲ್ಲಿ 55% ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ಗಮನಾರ್ಹವಾಗಿದೆ.

ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು, ಪರೀಕ್ಷಾ ಸಂಯೋಜಕರಾದ ರಾಘವೇಂದ್ರ ಬಿ ರಾವ್ ( ಅನು ಬೆಳ್ಳೆ ) ರವರು ಶ್ಲಾಘಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಾಳೆ ಕಾರ್ಕಳದಲ್ಲಿ ಅಲ್ಪ ಸಂಖ್ಯಾತರಿಗೆ ಮಾಹಿತಿ ಕಾರ್ಯಾಗಾರ!

ಅಲ್ಪಸಂಖ್ಯಾತ ಸಮುದಾಯದವರಿಗೆ ಸರ್ಕಾರದ ವತಿಯಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ನಾಳೆ (ಮಂಗಳವಾರ, ಜುಲೈ 8, 2025) ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಬೇವಿನ ಎಲೆಯ ಅದ್ಭುತ ಗುಣಗಳು: ಮೂತ್ರಪಿಂಡದ ಕಲ್ಲುಗಳಿಂದ ಮೊಡವೆ ನಿವಾರಣೆವರೆಗೆ!

ಪ್ರೋಟೀನ್, ವಿಟಮಿನ್-ಸಿ, ಕ್ಯಾರೋಟಿನ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುವ ಬೇವಿನ ಎಲೆಗಳು ಹಲವು ರೋಗಗಳಿಗೆ ರಾಮಬಾಣವಾಗಿವೆ.

ಮಣಿಪಾಲದಲ್ಲಿ ದುರಂತ: ಮೂರ್ಛೆ ರೋಗದಿಂದ ಬೇಸತ್ತು 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

ಮೂರ್ಛೆ ರೋಗದಿಂದ ಬಳಲುತ್ತಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ 80 ಬಡಗುಬೆಟ್ಟು ಗ್ರಾಮದ ರಾಜೀವನಗರದಲ್ಲಿ ನಡೆದಿದೆ.

ಜಲಪಾತದ ತುದಿಯಲ್ಲಿ ಪ್ರಪೋಸ್ ಮಾಡಲು ಹೋಗಿ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋದ ಯುವಕ : ವಿಡಿಯೋ ವೈರಲ್!

ತನ್ನ ಕನಸಿನ ಗೆಳತಿಗೆ ಜಲಪಾತದ ತುದಿಯಲ್ಲಿ ನಿಂತು ಪ್ರಪೋಸ್ ಮಾಡಲು ಪ್ರಯತ್ನಿಸುತ್ತಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.