
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಸಂಸ್ಥೆಗಳು ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ರೀತಿಯ ಅಪಪ್ರಚಾರ, ಅವಹೇಳನಕಾರಿ ಮಾಹಿತಿ ಪ್ರಕಟಣೆ, ಹಂಚಿಕೆ ಅಥವಾ ಪ್ರಚಾರ ನಿಷೇಧಿಸಲಾಗಿದೆ. ಈ ಸಂಬಂಧ ನ್ಯಾಯಾಲಯ ಜಾನ್ ಡೋ ಆದೇಶ ಹೊರಡಿಸಿದೆ.
ಜಾನ್ ಡೋ ಆದೇಶ ಎಂದರೇನು?
ಇದು ಅಜ್ಞಾತ ಅಥವಾ ಪತ್ತೆಯಾಗದ ವ್ಯಕ್ತಿಗಳ ವಿರುದ್ಧ ಜಾರಿಯಾಗುವ ಕಾನೂನು ಕ್ರಮ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಮತ್ತು ಮುದ್ರಿತ ಮಾಧ್ಯಮಗಳಲ್ಲಿ ಧರ್ಮಸ್ಥಳ ಮತ್ತು ಹೆಗ್ಗಡೆ ಕುಟುಂಬದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಈ ಆದೇಶ ಹೊರಡಿಸಲಾಗಿದೆ.
ನಿಷೇಧದ ವ್ಯಾಪ್ತಿ
✅ WhatsApp, Facebook, Instagram, YouTube, ಪತ್ರಿಕೆಗಳು, ನ್ಯೂಸ್ ಚಾನಲ್ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲಿ ಅಪಪ್ರಚಾರ ನಿಷಿದ್ಧ
✅ ಅವಹೇಳನಕಾರಿ ಪೋಸ್ಟ್, ವಿಡಿಯೋ ಅಥವಾ ಸುದ್ದಿಗಳನ್ನು ಹಂಚಿದರೆ ಕಠಿಣ ಕಾನೂನು ಕ್ರಮ
✅ ಆದೇಶ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಹಾಗೂ ದಂಡ ಶಿಕ್ಷೆ ಸಾಧ್ಯತೆ
ಈ ಆದೇಶದಿಂದ ಧರ್ಮಸ್ಥಳದ ಹೆಗ್ಗಡೆ ಕುಟುಂಬದ ತೇಜೋವಧೆ ತಡೆಗೊಳ್ಳಲಿದೆ. ನ್ಯಾಯಾಲಯ ಹೊರಡಿಸಿರುವ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.