
ಕಾರ್ಕಳ : ಕಲ್ಯಾ ಗ್ರಾಮ ವಾರ್ಡ್ ಕಾರ್ಯಕರ್ತರ ಸಭೆಯು ಮಾರ್ಚ್ 29. ಆದಿತ್ಯವಾರ ಗ್ರಾಮೀಣ ಸಮಿತಿಯ ಅಧ್ಯಕ್ಷ ರಘುಪತಿ ಪೂಜಾರಿಯವರ ಮನೆಯಲ್ಲಿ ಜರುಗಿತು.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯ ಮೂಲಕ ಜನಪರ ಆಡಳಿತವನ್ನು ನೀಡುತ್ತಿದೆ, ಇದರ ಪರಿಣಾಮ ಜನರ ಜೀವನ ಮಟ್ಟ ಸುಧಾರಿಸಿ ಎಲ್ಲರೂ ನೆಮ್ಮದಿಯ ಬದುಕು ಕಟ್ಟುವಂತಾಗಿದೆ, ಸ್ಥಳೀಯ ಸಂಸ್ಥೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಆಡಳಿತವಿದ್ದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ ಹಾಗಾಗಿ ಸ್ಥಳೀಯ ಕಾಂಗ್ರೆಸ್ ಆಡಳಿತಾತ್ಮಕ ಪಕ್ಷ ಸಂಘಟನೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಬ್ಲಾಕ್ ಅಧ್ಯಕ್ಷ ಶುಭದರಾವ್ ಮಾತನಾಡಿ ಬ್ಲಾಕ್ ಕಾಂಗ್ರೆಸ್ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮೀಣ ಸಮಿತಿಗೆ ಸರ್ವ ಸಹಕಾರ ನೀಡುತ್ತೇವೆ. ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದ್ದೇವೆ ಎಂದರು.
ಪಕ್ಷದ ಹಿರಿಯರಾದ ಅಚ್ಚುತ ಆಚಾರ್ಯ, ಅರುಣ ಜೋಗಿ, ಮತ್ತು ಸಾಧಕ ಯುವ ಕಾರ್ಯಕರ್ತ ರಿತಿನ್ ಪೂಜಾರಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಪಕ್ಷದ ಪಧಾದಿಕಾರಿಗಳಾದ ಸೋಮನಾಥ ನಾಯಕ್, ದೀಪಕ್ ಕೋಟ್ಯಾನ್, ಸಂತೋಷ್ ದೇವಾಡಿಗ, ಕಿರಣ್ ನಾಯಕ್, ಮಂಜುನಾಥ್ ಜೋಗಿ, ಅವಿನಾಶ್ ಶೆಟ್ಟಿ ಬೋಳ, ಯೋಗೀಶ್ ಬೋಳ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮೀಣ ಸಮಿತಿಯ ಅಧ್ಯಕ್ಷ ರಘುಪತಿ ಪೂಜಾರಿ ಸ್ವಾಗತಿಸಿದರು. ಗ್ಯಾರಂಟಿ ಸಮಿತಿ ಸದಸ್ಯ ಯತೀಶ್ ನಿರೂಪಿಸಿ, ಬೂತ್ ಅಧ್ಯಕ್ಷ ಸತೀಶ್ ಧನ್ಯವಾದವಿತ್ತರು.