spot_img

ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಸಭೆ

Date:

spot_img

ಕಾರ್ಕಳ : ಕಾರ್ಕಳ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಸರ್ವ ಸದಸ್ಯರ ಸಭೆಯು ನಿನ್ನೆ ಕಾಂಗ್ರೆಸ್ ಕಚೇರಿಯಲ್ಲಿ‌ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶುಭದರಾವ್ ಮಾತನಾಡಿ ಕಾರ್ಕಳ ಸರ್ವಧರ್ಮೀಯರ ಪವಿತ್ರ ಧಾರ್ಮಿಕ ಕೇಂದ್ರಗಳನ್ನು ಒಳಗೊಂಡ ಪುಣ್ಯ ಕ್ಷೇತ್ರವಾಗಿದೆ, ಇಲ್ಲಿ ಎಲ್ಲಾ ಧರ್ಮೀಯರ ಪಾಲ್ಗೊಳ್ಳುವಿಕೆಯಿಂದ ಕಾಪಾಡಿಕೊಂಡು ಬಂದಿರುವ ಸಹೋದರತೆ ಮತ್ತು ಸೌಹಾರ್ದತೆ ಇಡೀ ದೇಶಕ್ಕೆ ಮಾದರಿಯಾಗಿದೆ ಅದನ್ನು ಬೆಳೆಸಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು ಎಂದು ಅಭಿಪ್ರಾಯ ಪಟ್ಟರು. ಕೆಲವರು ರಾಜಕೀಯ ಹಿತಾಸಕ್ತಿಗಾಗಿ ಅಲ್ಪಸಂಖ್ಯಾತರನ್ನು ದ್ವಿತೀಯ ದರ್ಜೆಯ ಪ್ರಜೆಗಳಾಗಿ ನೋಡುವ ಪ್ರಯತ್ನವನ್ನು‌ ನಿರಂತರ ಮಾಡುತ್ತಾ ಅವರ ವಿರುದ್ದ ದ್ವೇಷ ಅಪ ನಂಬಿಕೆಯನ್ನು ಬಿತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕೀಳಾಗಿಸುವ ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಅಲ್ಪಸಂಖ್ಯಾತರ ರಕ್ಷಣೆ ಬಹುಸಂಖ್ಯಾತರಾದ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಕೆ.ಪಿ.ಸಿ.ಸಿ. ಸದಸ್ಯ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಉಪಾದ್ಯಕ್ಷರಾದ ಅಶ್ಫಕ್ ಅಹ್ಮದ್, ಜಾರ್ಜ್ ಕ್ಯಾಸ್ಟಲೀನೊ ನಕ್ರೆ, ಮಾಜಿ ಜಿಲ್ಲಾದ್ಯಕ್ಷ ಮೊಹಿದ್ದೀನ್ ಸಂದರ್ಭೋಚಿತ ಮಾತುಗಳನ್ನಾಡಿ ಘಟಕದ ಸಂಘಟನೆಗೆ ಸಲಹೆ ನೀಡಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ, ಕಾನೂನು ಘಟಕದ ಅಧ್ಯಕ್ಷ ರೆಹಮ್ಮತ್ತುಲ್ಲಾ, ಸೇವಾದಳದ ಅಧ್ಯಕ್ಷ ಅಬ್ದುಲಾ ಸಾಣೂರು, ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ಅತ್ತೂರು, ಅಂತೋಣಿ ಡಿ’ಸೋಜಾ ರಂಗನಪಲ್ಕೆ, ಗ್ರಾಮೀಣ ಅಧ್ಯಕ್ಷರಾದ, ಪ್ರಥ್ವಿರಾಜ್ ಜೈನ್, ರಾಜೇಶ್ ನೆಲ್ಸನ್, ವಿಲ್ಸನ್ ಲೋಬೋ, ರಮೇಶ್ ಶೆಟ್ಟಿ, ಉದಯ ಶೆಟ್ಟಿ ಕೌಡೂರು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಯೋಜಕರಾದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶೇಖ್ ಶಬ್ಬಿರ್ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಪುರಸಭಾ ಸದಸ್ಯ ವಿನ್ನಿ ಬೋಲ್ಡ್ ಧನ್ಯವಾದವಿತ್ತರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಳೆಗಾಲದಲ್ಲಿ ತಲೆಹೇನುಗಳ ಸಮಸ್ಯೆ ಹೆಚ್ಚಾಗಲು ಮಳೆಯೇ ಕಾರಣವೇ?

ಅದರಲ್ಲೂ ಮಳೆಯಲ್ಲಿ ನೆನೆಯುವುದರಿಂದ ತಲೆಯಲ್ಲಿ ಹೇನುಗಳಾಗುತ್ತವೆ ಎಂಬ ನಂಬಿಕೆ ಸಮಾಜದಲ್ಲಿ ವ್ಯಾಪಕವಾಗಿ ಹರಡಿದೆ.

ಹಾಲು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು: ಸತತ 3ನೇ ಬಾರಿ ತಾಲೂಕು ಉತ್ತಮ ಸಂಘ ಪ್ರಶಸ್ತಿ ಪಡೆದ ಗುಡ್ಡೆಯಂಗಡಿ

ದಕ್ಷಿಣ ಕನ್ನಡ ಜಿಲ್ಲೆಯ ಕುಲಶೇಖರ, ಮಂಗಳೂರು ಇದರ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು 2024-25ನೇ ಸಾಲಿನ ಉತ್ತಮ ಗುಣಮಟ್ಟದ ಹಾಲು ಉತ್ಪಾದಕರ ಸಂಘ ಪ್ರಶಸ್ತಿಯನ್ನು ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೀಡಿ ಗೌರವಿಸಿದೆ

ರಜನಿಕಾಂತ್‌ರ “ಕೂಲಿ” ಚಿತ್ರದ ಟ್ರೈಲರ್ ಅಬ್ಬರ: ಕನ್ನಡಿಗ ಉಪೇಂದ್ರ ಪಾತ್ರದ ಬಗ್ಗೆ ಹೆಚ್ಚಿದ ಕುತೂಹಲ

ಸೂಪರ್‌ಸ್ಟಾರ್ ರಜನಿಕಾಂತ್ ಅವರ 171ನೇ ಸಿನಿಮಾ "ಕೂಲಿ" ಟ್ರೈಲರ್ ಬಿಡುಗಡೆಯಾಗಿ ದೇಶಾದ್ಯಂತ ದೊಡ್ಡ ಸಂಚಲನ ಮೂಡಿಸಿದೆ

ನೂತನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ: ಕುಲ್ಗಾಮ್‌ನಲ್ಲಿ 3 ಉಗ್ರರ ಹತ್ಯೆ

ಕಣಿವೆ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪಿಸಲು ಭಾರತೀಯ ಸೇನೆಯು ಮತ್ತೊಂದು ಮಹತ್ವದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.