
ಸಮಾಜದ ಶೋಷಿತ ವರ್ಗಗಳ ಬದುಕಿನ ಹೊಸ ಜೀವನೋತ್ಸಾಹದ ಮಾರ್ಗಾನ್ವೇಷಣೆಯೇ ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕಿನ ಹೋರಾಟದ ಗುರಿಯಾಗಿತ್ತು. ಆ ಹೋರಾಟದಲ್ಲಿ ಅಂಧ ಶ್ರದ್ಧೆಗಳ ನಿವಾರಣೆ, ಶೈಕ್ಷಣಿಕ ಸಾಮಾಜಿಕ ಸ್ವಾತಂತ್ರ್ಯ, ಬದುಕಿನ ಸ್ವಾಯತ್ತತೆ ಅಡಗಿತ್ತು. ಆ ನೆಲೆಯಲ್ಲಿ 1924 ರಲ್ಲಿ ಗುರುಗಳ ನೇತೃತ್ವದಲ್ಲಿ ನಡೆದ ವೈಖಂ ಚಳವಳಿ ಮಹಾತ್ಮ ಗಾಂಧೀಜಿಯವರ ಮನಗೆದ್ದದ್ದಷ್ಟೇ ಅಲ್ಲ ಕಾಂಗ್ರೆಸ್ ಪಕ್ಷ ಈ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಂತೆ ಮಾಡಿತ್ತು. ಸ್ವಾತಂತ್ರ್ಯ ಹೋರಾಟದ ಕ್ವಿಟ್ ಇಂಡಿಯಾ ಚಳವಳಿಗೆ ಇದು ಸ್ಪೂರ್ತಿ ನೀಡಿತ್ತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ ಚಂದ್ರಪಾಲ್ ನಕ್ರೆ ಹೇಳಿದ್ದಾರೆ.
ಅವರು ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ ಪಳ್ಳಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು.
ಹಿರಿಯ ನ್ಯಾಯವಾದಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಮಡಿವಾಳ ಮಾತಾಡಿ ಜನಾಂಗೀಯ ಸಂಕುಚಿತತೆ, ದ್ವೇಷ, ಮತೀಯತೆ, ಅಸೂಯೆಗಳನ್ನು ಬದಿಗಿಟ್ಟು ಶೈಕ್ಷಣಿಕ ಔಧ್ಯೋಗಿಕ ಸಾಮಾಜಿಕ ಕ್ರಾಂತಿಯ ಮೂಲಕ ಸಾಮಾಜವನ್ನು ಕಟ್ಟ ಬೇಕೆನ್ನುವುದು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯವಾಗಿತ್ತು. ಬಹುಶ ಕಾಂಗ್ರೆಸ್ ಪಕ್ಷ ತನ್ನ ಆಡಳಿತದಲ್ಲಿ ಗುರುಗಳ ಆಶಯವನ್ನು ಈಡೇರಿಸುತ್ತ ಬಂದಿರುವ ದೇಶದ ಏಕಮೇವ ಪಕ್ಷ ಎನ್ನುವುದು ಉಲ್ಲೇಖನೀಯ. ಬಡವರಿಗೆ ಕೊಡಮಾಡುವ ನಿವೇಶನ, ಆಶ್ರಯ, ಮನೆಗಳು, ವೃದ್ದಾಪ್ಯ, ವಿಧವಾ ವೇತನಗಳು, ಅನ್ನಭಾಗ್ಯ, ಪಂಚ ಗ್ಯಾರಂಟಿ ಯೋಜನೆಗಳು ನಾರಾಯಣ ಗುರುಗಳ ಮನದಾಶಯದ ಯೋಜನೆಗಳು. ಇವುಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಬಲಪಡಿಸೋಣ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದಾ ರಾವ್ ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಜನಾಂಗದ ಗುರು. ಅಜ್ಞಾನದ ಅಂಧಕಾರದಲ್ಲಿ ಮುಳುಗಿ ಹುಚ್ಚರ ಆಸ್ಪತ್ರೆಯಂತಿದ್ದ ಕೇರಳವನ್ನು ಇದೀಗ ದೇಶದಲ್ಲಿಯೇ ಅತೀ ಮುಂದುವರಿದ ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸಿದ ನಾರಾಯಣ ಗುರುಗಳು ಶೈಕ್ಷಣಿಕ ಕ್ರಾಂತಿಯ ಹರಿಕಾರ. ಅವರು ಹಾಕಿಹೋದ ಮನುಕುಲದ ಅಭ್ಯುದಯದ ದಾರಿಯಲ್ಲಿ ನಡೆಯುವುದು ನಮ್ಮ ಕರ್ತವ್ಯ. ಅ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅವರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ತನ್ನ ಆಡಳಿತದ ಜನಪರ ಚಿಂತನೆಯ ರಾಜಧರ್ಮವನ್ನಾಗಿ ಮಾಡಿಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯನ್, ರಾಜ್ಯ ಕೃಷಿ ಘಟಕದ ಕಾರ್ಯದರ್ಶಿ ಗ್ರಾಮ ಉಸ್ತುವಾರಿ ಉದಯ ಶೆಟ್ಟಿ ಕುಕ್ಕುಂದೂರು, ಮಹಿಳಾ ಕಾಂ ಅದ್ಯಕ್ಷೆ ಭಾನು ಭಾಸ್ಕರ ಪೂಜಾರಿ ಹಾಗೂ ತಾಲೂಕು ಗ್ಯಾರಂಟಿ ಸಮಿತಿ ಅದ್ಯಕ್ಷ ಅಜಿತ್ ಹೆಗ್ಡೆ ಕೂಡ ಸಂಧರ್ಭೋಚಿತವಾಗಿ ಮಾತಾಡಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು ವಿಶ್ವನಾಥ ಭಂಡಾರಿ ನಿಂಜೂರು, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಸೂರಜ್ ಶೆಟ್ಟಿ ನಕ್ರೆ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ, ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿಲ್ಸನ್ ಲೋಬೊ ಹಿರಿಯ ಕಾಂಗ್ರೆಸ್ಸಿಗ ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಕೃಷಿ ಘಟಕದ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ ನಿಂಜೂರು, ಗ್ಯಾರಂಟಿ ಸಮಿತಿ ಸದಸ್ಯರಾದ ಸಂತೋಷ ಶೆಟ್ಟಿ ನಿಂಜೂರು, ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಆಚಾರ್ಯ ಪಳ್ಳಿ, ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸುಜೀತ್ ಪೂಜಾರಿ ನಿಂಜೂರು, ಪಳ್ಳಿ- ನಿಂಜೂರು ಬೂತ್ ಅಧ್ಯಕ್ಷರು, ಮಹಿಳಾ ಬೂತ್ ಅಧ್ಯಕ್ಷರು, ಯುವ ಬೂತ್ ಅಧ್ಯಕ್ಷರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಳ್ಳಿ ಪಂಚಾಯತ್ ಸದಸ್ಯರಾದ ವಿಜಯ ಎಮ್ ಶೆಟ್ಟಿ ಪಳ್ಳಿ ಸ್ವಾಗತಿಸಿದರು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ದಿನಕರ ಶೆಟ್ಟಿ ಧನ್ಯವಾದವಿತ್ತರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾರ್ಕಳ ಬ್ಲಾಕ್ ಮಾಜಿ ಅಧ್ಯಕ್ಷ ರಘುಶ್ಚಂದ್ರನಾಥ್ ಕಾರ್ಯಕ್ರಮ ನಿರೂಪಣೆ ಮಾಡಿದರು.