
ಹುಬ್ಬಳ್ಳಿ: “ಕಾಂಗ್ರೆಸ್ ಹಿಂದೂಗಳ ಪಕ್ಷವಲ್ಲ, ಅದು ಮುಸ್ಲಿಂ ಹಿತಕ್ಕಾಗಿ ಹುಟ್ಟಿದ ಪಕ್ಷ. ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್ ಆಗಿದ್ದಾರೆ. ಅವರಿಗೆ ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿಯಾಗಲು ಅವಕಾಶ ಕೊಡಬೇಕು,” ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾನುವಾರ ಭಾರೀ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಂತೋಷ್ ಲಾಡ್ ಪ್ರಧಾನಮಂತ್ರಿ ಮೋದಿ ವಿರುದ್ಧ ಹೀಯಾಳನೆ ಮಾತುಗಳಿಂದ ಕಾಂಗ್ರೆಸ್ ನಾಯಕತ್ವದ ಮೆಚ್ಚುಗೆ ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಮೋದಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ,” ಎಂದು ಟೀಕಿಸಿದರು. “ಅಂಬೇಡ್ಕರ್ ಅವರ ಹೇಳಿಕೆಯನ್ನು ಪ್ರಕಾರ, ದಲಿತರು ಕಾಂಗ್ರೆಸ್‌ಗೆ ಮತ ಹಾಕಬಾರದು,” ಎಂದರು.
ರೈಲ್ವೇ ಪರೀಕ್ಷೆಯಲ್ಲಿ ಮಂಗಳಸೂತ್ರ, ಕುಂಕುಮ, ಜನಿವಾರ ನಿಷೇಧ ಕುರಿತು, “ಯಾರು ಮಂಗಳಸೂತ್ರ ಅಥವಾ ಕುಂಕುಮ ನಿಷೇಧ ಮಾಡಿದರೂ, ಅವರನ್ನು ವಜಾ ಮಾಡಬೇಕು,” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು.
ಶಾಸಕರ ವಜಾ ರದ್ದುಗೊಳಿಸುವ ವಿಚಾರವಾಗಿ ವಿಜಯೇಂದ್ರ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, “ಅಪ್ರಭುದ್ಧ ವ್ಯಕ್ತಿಯನ್ನು ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಸದನದ ಶಿಸ್ತು ಕಾಪಾಡಬೇಕು,” ಎಂದು ಒತ್ತಾಯಿಸಿದರು.
ಪಾಕಿಸ್ತಾನದ ಬೆದರಿಕೆ ಕುರಿತು ಮಾತನಾಡಿ, “ಪಾಕಿಸ್ತಾನದ ಅಣು ಬಾಂಬ್ ಬೆದರಿಕೆಗೆ ಹೆದರುವ ಅವಶ್ಯಕತೆ ಇಲ್ಲ. ಭಾರತವು ಬಲಿಷ್ಠ ರಾಷ್ಟ್ರವಾಗಿದೆ. ಯುದ್ಧವಾದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶವೂ ನಾಶವಾಗಬೇಕು. ಭಾರತದಲ್ಲಿ ಎಲ್ಲರೂ ಒಗ್ಗೂಡಬೇಕು,” ಎಂದು ಹೇಳಿದರು.
ತಮ್ಮ ವಿರುದ್ಧದ ಪ್ರಕರಣಗಳ ಕುರಿತು, “ನಾನು ಹಿಂದೂ ಪರ ಮಾತನಾಡಿದ ಕಾರಣ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಹೈಕೋರ್ಟ್‌ನಿಂದ ತಡೆ ಉಂಟಾಗಿದೆ,” ಎಂದು ಸ್ಪಷ್ಟಪಡಿಸಿದರು.