
ನಿಟ್ಟೆ: ಎಪ್ರಿಲ್ 16ರಂದು ಆಯೋಜಿಸಲ್ಪಟ್ಟಂತಹ ಬೇಸಿಗೆ ಶಿಬಿರ “ಮಿನುಗುತಾರೆ” ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ಕಲ್ಯಾ ಹಾಳ್ಳೆಕಟ್ಟೆಯ ಶಿಕ್ಷಕಿ ಶಾರದಾರವರಿಗೆ ನಿಟ್ಟೆ ಬ್ರಹ್ಮಕುಮಾರಿ ಬೃಂದಾವನ ಧ್ಯಾನ ಮಂದಿರ ಕೇಂದ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಜಯಂತಿ ಶೆಟ್ಟಿ, ಹಿರಿಯ ಅಧ್ಯಾಪಕಿ ಸರಕಾರಿ ಪದವಿ ಪೂರ್ವ ಕಾಲೇಜು, ಬೆಳ್ಮಣ್ಣು ಭಾಗವಹಿಸಿದ್ದರು. ಆಯೋಜಕರಾದ ಮನೋಹರ್ ಶೆಟ್ಟಿ, ಯಶೋಧ ಶೆಟ್ಟಿ ಮತ್ತು ಜಯಂತಿ ಶೆಟ್ಟಿಯವರು ಶಾರದ ಟೀಚರ್ ರವರಿಗೆ ಅಭಿನಂದಿಸಿದರು.
ಬೇಸಿಗೆ ಶಿಬಿರ “ಮಿನುಗುತಾರೆ” ಕಾರ್ಯಕ್ರಮವು ಏಪ್ರಿಲ್ 19 ನೇ ತಾರೀಖಿನ ತನಕ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಬೇರೆ ಬೇರೆ ಕ್ರಿಯಾ ಚಟುವಟಿಕೆಗಳಲ್ಲಿ ಭಾಗವಹಿಸಿ ಅದರ ಲಾಭವನ್ನು ಪಡೆದುಕೊಂಡರು.