spot_img

ಶ್ರದ್ಧಾಂಜಲಿ ವೇದಿಕೆಯಲ್ಲಿ ಕೋಮು ದ್ವೇಷದ ಭಾಷಣ : ಕಲ್ಲಡ್ಕ ಪ್ರಭಾಕರ್ ಭಟ್‌ ವಿರುದ್ಧ ಎಫ್‌ಐಆರ್

Date:

spot_img

ಬಂಟ್ವಾಳ: ಕೋಮು ಸೌಹಾರ್ದತೆಗೆ ಧಕ್ಕೆಯಾದಂತೆ ಮಾತನಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಹಿಂದೂ ಜಾಗರಣ ವೇದಿಕೆಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ಅವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 12ರಂದು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್‌ ಮಾತನಾಡಿದ್ದರು. ಅವರ ಭಾಷಣದಲ್ಲಿ ಸಮಾಜದಲ್ಲಿ ಕೋಮು ದ್ವೇಷ ಹುಟ್ಟುಹಾಕುವ ರೀತಿಯ ಪ್ರಚೋದನಕಾರಿ ಹೇಳಿಕೆಗಳಿದ್ದು, ಇದು ಶಾಂತಿಯುತ ಸಹವಾಸಕ್ಕೆ ಅಡ್ಡಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಜೂನ್ 2ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 353 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಸಂಖ್ಯೆ 60/2025 ಆಗಿದೆ.

ಈ ಮೊದಲೇ ಅವರ ವಿರುದ್ದ ಸಾರ್ವಜನಿಕ ವೇದಿಕೆಗಳಲ್ಲಿ ಉಗ್ರ ಭಾಷಣ ಮಾಡುವ ಆರೋಪಗಳು ಕೇಳಿಬಂದಿರುವುದರಿಂದ, ಇದೀಗ ದಾಖಲಾಗಿರುವ ಪ್ರಕರಣ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿದೆ.

ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದು, ಅಗತ್ಯ ದಾಖಲೆಗಳ ಸಂಗ್ರಹ ಕಾರ್ಯ ಕೂಡ ಪ್ರಾರಂಭವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರೋಟಾನ್‌ನಿಂದ ‘ಲುಮೋ’ AI ಚಾಟ್‌ಬಾಟ್ ಬಿಡುಗಡೆ

ಸುರಕ್ಷಿತ ಇಮೇಲ್ ಮತ್ತು ವಿಪಿಎನ್‌ ಸೇವೆಗಳಿಗೆ ಹೆಸರುವಾಸಿಯಾಗಿರುವ ಪ್ರೋಟಾನ್ ಕಂಪನಿಯು, ಹೊಸ ಎಐ ಚಾಟ್‌ಬಾಟ್ ಒಂದನ್ನು ಬಿಡುಗಡೆ ಮಾಡಿದೆ. ‘ಲುಮೋ’ (Lumo) ಎಂದು ಹೆಸರಿಸಲಾದ ಈ ಚಾಟ್‌ಬಾಟ್ ಅನ್ನು ಗೌಪ್ಯತೆಯನ್ನು ಪ್ರಥಮ ಆದ್ಯತೆಯಾಗಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಹುಲಿಕಲ್ ಘಾಟಿಯಲ್ಲಿ ಮತ್ತೊಮ್ಮೆ ಭಾರೀ ಕುಸಿತ; ಶೀಘ್ರವೇ ಬೃಹತ್ ವಾಹನಗಳ ಸಂಚಾರ ನಿಷೇಧ ಸಾಧ್ಯತೆ!

ರಾಜ್ಯದ ಪ್ರಮುಖ ಘಾಟ್‌ಗಳಲ್ಲಿ ಒಂದಾದ ಹುಲಿಕಲ್ ಘಾಟ್ (ಬಾಳೆಬರೆ) ರಸ್ತೆಯಲ್ಲಿ ಮತ್ತೆ ದೊಡ್ಡ ಪ್ರಮಾಣದ ಕುಸಿತ ಸಂಭವಿಸಿದ್ದು, ಇದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಧರ್ಮಸ್ಥಳ ಪ್ರಕರಣ: 11ನೇ ಸ್ಥಳದಲ್ಲಿ ಶೋಧ ವಿಫಲ; 6ನೇ ಸ್ಥಳದ ಅಸ್ಥಿಪಂಜರ ಕೇಸ್ SITಗೆ ವರ್ಗಾವಣೆ!

ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಧರ್ಮಸ್ಥಳ ಪ್ರಕರಣದ ತನಿಖೆ ಮುಂದುವರೆದಿದೆ. ಆದರೆ, ಆಗಸ್ಟ್ 5ರಂದು ನಡೆಸಿದ ಶೋಧಕಾರ್ಯದಲ್ಲಿ ದೂರುದಾರರು ಗುರುತು ಮಾಡಿದ್ದ 11ನೇ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.

ಕಾಂಗ್ರೆಸ್ ಸಿದ್ಧಾಂತ ಜನರಿಗೆ ತಲುಪಿಸಿ: ಯಶಸ್ಸು ತಾತ್ಕಾಲಿಕವಲ್ಲ ಎಂದ ಕಿಮ್ಮನೆ ರತ್ನಾಕರ್

ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವು ಮತ್ತು ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವಂತೆ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.