
ಬೆಲೆ ಕುಸಿತದಿಂದ ಚಿಂತಿತರಾಗಿದ್ದ ತೆಂಗಿನ ಬೆಳೆಗಾರರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಮದುವೆ ಸೀಜನ್ ಆರಂಭಕ್ಕೂ ಮುನ್ನವೇ ತೆಂಗಿನಕಾಯಿ ಮತ್ತು ಕೊಬ್ಬರಿಗೆ ಬಂಪರ್ ಬೆಲೆ ಸಿಕ್ಕಿದ್ದು, ಕೃಷಿಕರ ಮುಖದಲ್ಲಿ ಸಂತೋಷ ಮೂಡಿಸಿದೆ.
ಪ್ರಸ್ತುತ ತೆಂಗಿನಕಾಯಿ ಕ್ವಿಂಟಲ್‌ಗೆ ಸಗಟು ದರ ₹65,000-₹70,000 ನಡುವೆ ವ್ಯಾಪಾರವಾಗುತ್ತಿದ್ದು, ದಪ್ಪ ಕಾಯಿ ₹65, ಮಧ್ಯಮ ₹45, ಮತ್ತು ಸಣ್ಣ ಕಾಯಿ ₹30ಕ್ಕೆ ಸಗಟು ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ದಪ್ಪ ಕಾಯಿ ₹70, ಮಧ್ಯಮ ₹50, ಮತ್ತು ಸಣ್ಣ ಕಾಯಿ ₹35ಗೆ ಮಾರಾಟವಾಗುತ್ತಿದೆ. ಕಳೆದ ವರ್ಷದ ತೂಲನೆಯಲ್ಲಿ ಈ ಬಾರಿ ಬೆಲೆ ಮೂರು ಪಟ್ಟು ಹೆಚ್ಚಾಗಿದೆ.