


ಉಡುಪಿಯ ಚಿತ್ರಸಿರಿ ಆರ್ಟ್ ಸೆಂಟರ್ ಆಯೋಜಿಸಿರುವ ಮಕ್ಕಳ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಉಡುಪಿ ಸೌತ್ ಸ್ಕೂಲ್ ಎದುರುಗಡೆ ಇರುವ ದೈವಜ್ಞ ಕಲಾಮಂದಿರದಲ್ಲಿ ಜನವರಿ 25ರಂದು ಮಧ್ಯಾಹ್ನ 3:00 ಗಂಟೆಗೆ ನಡೆಯಿತು
ಉಡುಪಿಯ ಕಲಾವಿದ್ಯಾಲಯ ಜಂಗಮಠದಚಿತ್ರಕಲಾ ಮಂದಿರದ ನಿರ್ದೇಶಕರಾದ ಶ್ರೀಯುತ ನಿರಂಜನ್ ಯು .ಸಿ ಅವರು ದೀಪ ಬೆಳಗಿಸಿ ಮತ್ತು ಚಿತ್ರಕಲೆಯ ಅನಾವರಣ ಮಾಡುವ ಮೂಲಕ ಉದ್ಘಾಟನೆಯನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕರಾದ ಶ್ರೀಯುತ ಮೋಹನ್ ಕಡಬ ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ. ಶ್ರುತಿ ಬಲ್ಲಾಳ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಂಚನಬೆಟ್ಟು ಇಲ್ಲಿನ ಮುಖ್ಯೋಪಾಧ್ಯಾಯರಾಗಿರುವ ಶ್ರೀ ಪಾಂಡುರಂಗ ನಾಯ್ಕ್ ಶ್ರೀಮತಿ ಬಬಿತಾ ಸುವರ್ಣ ಶ್ರೀ ಪ್ರಕಾಶ್ ಬಂಗೇರ ಹಾಗೂ ಎಕ್ಸ್ಟ್ರೀಮ್ ಡ್ಯಾನ್ಸ್ ಅಕಾಡೆಮಿಯ ನಿರ್ದೇಶಕರಾದ ಮಂಜಿತ್ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿದ್ದರು
ಚಿತ್ರಸಿರಿ ಆರ್ಟ್ಸ್ ಸೆಂಟರ್ ನ ಸಾಧಕ ವಿದ್ಯಾರ್ಥಿಗಳನ್ನು ಮತ್ತು ಚಿತ್ರಸಿರಿಗೆ ಸದಾ ಬೆಂಬಲವನ್ನ ನೀಡುವ ಯುವಕರನ್ನು ಸನ್ಮಾನಿಸಲಾಯಿತು
ಹಿರಿಯ ಗುರುಗಳಾದ ಶ್ರೀ ಪಾಂಡುರಂಗ ನಾಯ್ಕ್ ಮತ್ತು ಎಕ್ಸ್ಟ್ರೀಮ್ ಡ್ಯಾನ್ಸ್ ಅಕಾಡೆಮಿಯ ಮಂಜಿತ್ ಶೆಟ್ಟಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು ಈ ಕಾರ್ಯಕ್ರಮದಲ್ಲಿ ಶ್ರೀಮತಿ ನಮ್ರತಾ ರಾಕೇಶ್ ಶೆಟ್ಟಿ ಇವರಿಗೂ ಅಭಿನಂದನೆ ನೀಡಿ ಸನ್ಮಾನಿಸಲಾಯಿತು
ಹೆತ್ತವರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು
ಕುಮಾರಿ ಪ್ರಿಯದರ್ಶಿನಿ ಪ್ರಾರ್ಥಿಸಿದರು ಚಿತ್ರಸಿರಿಯ ಶಿಕ್ಷಕಿ ನಿಕಿತಾ ಎಲ್ಲರನ್ನೂ ಸ್ವಾಗತಿಸಿದರು.


ಶ್ರೀಮತಿ ಲತಾ ಶೇಟ್ ಧನ್ಯವಾದ
ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ನಮೃತ ರಾಕೇಶ್ ಶೆಟ್ಟಿ ನಡೆಸಿಕೊಟ್ಟರು. ಚಿತ್ರ ಸಿರಿಯ ಕಲಾ ನಿರ್ದೇಶಕರಾದ ಶ್ರೀ ದಿವಾಕರ್ ಸಾಣೆಕಲ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಜನವರಿ 26ರಂದು ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು ಮಕ್ಕಳ ಚಿತ್ರಕಲಾ ಪ್ರದರ್ಶನವು ಮುಂದುವರೆಯಲಿದೆ ಮಕ್ಕಳ ಚಿತ್ರಕಲಾ ಪ್ರದರ್ಶನದ ಜೊತೆಗೆ ಅದರ ಖರೀದಿಗೂ ಮುಕ್ತ ಅವಕಾಶವಿದೆ.




ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಆದರಪೂರ್ವಕವಾಗಿ ಸ್ವಾಗತಿಸುವವರು ಚಿತ್ರಸಿರಿ ಆರ್ಟ್ಸ್ ಸೆಂಟರ್ನ ಕಲಾ ವಿದ್ಯಾರ್ಥಿಗಳು ಮತ್ತು ಪೋಷಕರು.