ಕೋವಿಡ್-19 ಹಾವಳಿಗೆ ಚೀನಾ ಕಾರಣ! ಅಮೆರಿಕದ ಮಿಸ್ಸೌರಿ ಕೋರ್ಟ್ ತೀರ್ಪು

Date:

spot_img

ವಾಷಿಂಗ್ಟನ್: ಅಮೆರಿಕದ ಮಿಸ್ಸೌರಿ ಫೆಡರಲ್ ನ್ಯಾಯಾಲಯವು ಕೋವಿಡ್-19 ಸಾಂಕ್ರಾಮಿಕ ಹರಡಲು ಚೀನಾ ಸರ್ಕಾರ ನೇರ ಹೊಣೆ ಎಂದು ಘೋಷಿಸಿ, ಭಾರೀ ದಂಡ ವಿಧಿಸಿದೆ.

ಚೀನಾದ ಸರಕಾರ ಸಾಂಕ್ರಾಮಿಕ ಸಮಯದಲ್ಲಿ ಪಿಪಿಇ ಕಿಟ್‌ಗಳ ಮೇಲೆ ಏಕಸ್ವಾಮ್ಯ ಸಾಧಿಸಲು ಮುಂದಾದ ಕಾರಣ ಈ ಮಹಾಮಾರಿ ಮತ್ತಷ್ಟು ಉಲ್ಭಣಗೊಂಡಿತು ಎಂದು ನ್ಯಾಯಾಧೀಶ ಸ್ಠೀಫನ್ ಎನ್. ಲಿಂಬೌಫ್ ಹೇಳಿದ್ದಾರೆ. ಜನರ ಸಾವಿನ ಬಗ್ಗೆ ಮಾಹಿತಿ ಮುಚ್ಚಿಡುವುದು, ಬೇರೆ ದೇಶಗಳಿಗೆ ದುಪ್ಪಟ್ಟು ಬೆಲೆಗೆ ಪಿಪಿಇ ಕಿಟ್ ಮಾರಾಟ ಮಾಡುವಂತಹ ಆರೋಪಗಳ ಮೇಲೆ ಚೀನಾಗೆ 24 ಬಿಲಿಯನ್ ಡಾಲರ್ (ಸುಮಾರು 2.09 ಲಕ್ಷ ಕೋಟಿ) ದಂಡ ವಿಧಿಸಲಾಗಿದೆ.

ಈ ಮೊದಲು, ಅಮೆರಿಕದ ಮಿಸ್ಸೌರಿ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯಲ್ಲಿ, ಕೋವಿಡ್-19 ವೈರಸ್‌ ಚೀನಾದ ವುಹಾನ್‌ ಲ್ಯಾಬ್‌ನಲ್ಲಿ ಸೃಷ್ಟಿಯಾಗಿದೆ ಮತ್ತು ಚೀನಾದ ಸರ್ಕಾರ ಪಿಪಿಇ ಕಿಟ್‌ಗಳ ರಫ್ತು ತಡೆಯುವ ಮೂಲಕ ರೋಗದ ನಿಯಂತ್ರಣ ಅಸಾಧ್ಯವಾಯಿತು ಎಂದು ಆರೋಪಿಸಲಾಗಿತ್ತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜಯರಾಮ ಬನಾನ ಸಾಧನೆಗೆ ಕೋಟ ಪೂಜಾರಿ ಮೆಚ್ಚುಗೆ

ಉದ್ಯಮಿ ಜಯರಾಮ ಬನಾನ ಸಾಧನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೊಂಡಾಡಿದ್ದು, ಮೋದಿ ಸರ್ಕಾರದ ಸಾಧನಾ ಪುಸ್ತಕ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಎಸ್.ವಿ.ಟಿ. ಕಾಲೇಜಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ

ಕಾರ್ಕಳ ಎಸ್.ವಿ.ಟಿ. ಕಾಲೇಜಿನಲ್ಲಿ ರೋಟರಿ ಪ್ರಾಯೋಜಿತ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ನೆರವೇರಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿ: ಧರ್ಮಸ್ಥಳ ಯೋಜನೆಯಿಂದ ಉಚಿತ ಹೊಲಿಗೆ ತರಬೇತಿ ಚಾಲನೆ

ಉಡುಪಿಯ ಬೊಮ್ಮರಬೆಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3 ತಿಂಗಳ ಉಚಿತ ಹೊಲಿಗೆ ತರಬೇತಿಗೆ ಚಾಲನೆ ಸಿಕ್ಕಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿ: ಮಹಿಳೆಯರಿಗೆ ಸರ್ಕಾರಿ ಇಲಾಖೆಗಳ ಅಧ್ಯಯನ ಪ್ರವಾಸ

ಉಡುಪಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಶೈಕ್ಷಣಿಕ ಹಾಗೂ ಜಾಗೃತಿ ಅಧ್ಯಯನ ಪ್ರವಾಸ ಆಯೋಜನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ