
ಕಾರ್ಕಳ : ಕಾರ್ಕಳದ ವಿಜೇತ ವಿಶೇಷ ಶಾಲೆಯಲ್ಲಿ ಮಕ್ಕಳ ಪ್ರಗತಿ ಪರಿಶೀಲನಾ ಸಭೆ ಹಾಗೂ ದಿ. ವರದರಾಜ್ ಪೈಯವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಿ.ಜೆ.ಎಮ್ ಪೈ ಕಾರ್ಕಳ ಇದರ ಮಾಲಕರಾದ ಪಿ ನರಸಿಂಹ ಎನ್ ಪೈ & ಶ್ರೀಮತಿ ಪಿ ಲಕ್ಷ್ಮೀ ಎನ್ ಪೈ ದಂಪತಿಗಳು ವಿಜೇತ ವಿಶೇಷ ಶಾಲಾ ಮಕ್ಕಳಿಗೆ ದಿ.ವರದರಾಜ್ ಪೈ ಇವರ ಸ್ಮರಣಾರ್ಥ ಅನ್ನದಾನದ ವ್ಯವಸ್ಥೆಯನ್ನು ಮಾಡಿದ್ದರು.

ಈ ಸಂದರ್ಭದಲ್ಲಿ ದಿಶಾ ಪೈ, ತಾಲೂಕು ಆರೋಗ್ಯ ಕಛೇರಿ ಕಾರ್ಕಳ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸುಶೀಲಾ, ತಾಲೂಕು ಆರೋಗ್ಯ ಕಛೇರಿ ಕಾರ್ಕಳ ಆರ್ ಬಿ ಎಸ್ ಕೆ ವೈದ್ಯಾಧಿಕಾರಿಗಳಾದ ಡಾ.ಸುಮ ಉಪಸ್ಥಿತರಿದ್ದರು.
ವಿಶೇಷ ಮಕ್ಕಳ ಪ್ರಗತಿ ಪರಿಶೀಲನಾ ಸಭೆಯನ್ನು ಏರ್ಪಡಿಸಿದ್ದು ವಿದ್ಯಾರ್ಥಿಗಳ ಪ್ರಗತಿಯ ಕುರಿತಾಗಿ ಹೆತ್ತವರಿಗೆ ತಿಳಿಸಿ ಪ್ರಗತಿ ಪತ್ರವನ್ನು ವಿತರಿಸಲಾಯಿತು. ಹೆತ್ತವರು , ಮಕ್ಕಳು ಮತ್ತು ಸಿಬ್ಬಂದಿವರ್ಗದವರು ಸೇರಿದಂತೆ ಒಟ್ಟು 200ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
































