

ಉಡುಪಿಯ ಚಿತ್ರಸಿರಿ ಆರ್ಟ್ಸ್ ಸೆಂಟರ್ ಪ್ರಸ್ತುತ ಪಡಿಸುವ ಮಕ್ಕಳ ಚಿತ್ರ ಪ್ರದರ್ಶನ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ ದೈವಜ್ಞ ಕಲಾಮಂದಿರ ಸೌತ್ ಸ್ಕೂಲ್ ಎದುರುಗಡೆ ಒಳಕಾಡು ಇಲ್ಲಿ ಜನವರಿ 25 ಮತ್ತು 26ರಂದು ನಡೆಯಲಿದೆ.
ಜನವರಿ 26ರಂದು ಬೆಳಿಗ್ಗೆ 9:00ಗೆ ಸರಿಯಾಗಿ ಚಿತ್ರಕಲೆ ಸ್ಪರ್ಧೆ ನಡೆಯಲಿದ್ದು ಎಲ್ಕೆಜಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು.ಎಲ್ ಕೆ ಜಿ ಇಂದ ನಾಲ್ಕನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ವಿಷಯ ಐಚ್ಚಿಕವಾಗಿರುತ್ತದೆ. ಐದರಿಂದ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ವಿಷಯ ಕನ್ನಡ. ಎಂಟರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ವಿಷಯವನ್ನು ತಿಳಿಸಲಾಗುವುದು.
ಜನವರಿ 25ರ ಅಪರಾಹ್ನ 3 ಗಂಟೆಗೆ ಮಕ್ಕಳ ಚಿತ್ರ ಕಲಾ ಪ್ರದರ್ಶನ ಉದ್ಘಾಟನೆಗೊಳ್ಳಲಿದ್ದು 26 ಜನವರಿ ಸಂಜೆ 7 ಗಂಟೆವರೆಗೆ ಚಿತ್ರಕಲೆಗಳ ಮುಕ್ತ ವೀಕ್ಷಣೆಗೆ ಅವಕಾಶವಿದೆ. ಚಿತ್ರಗಳು ಖರೀದಿಗೂ ಲಭ್ಯವಿದೆ ಎಂದು ಚಿತ್ರಸಿರಿ ಆರ್ಟ್ಸ್ ಸೆಂಟರ್ ನ ನಿರ್ದೇಶಕರಾದ ಶ್ರೀ ದಿವಾಕರ್ ಸಾಣೆಕಲ್ ತಿಳಿಸಿರುತ್ತಾರೆ.
ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಸ್ವಾಗತಿಸುವ ಚಿತ್ರಸಿರಿಆರ್ಟ್ಸ್ ಸೆಂಟರ್ ನ ಕಲಾವಿದ್ಯಾರ್ಥಿಗಳು ಮತ್ತು ಪೋಷಕರು.