spot_img

ಕಾಡಿನಲ್ಲಿ ಕಳೆದುಹೋದ 10 ಮೆಡಿಕಲ್ ವಿದ್ಯಾರ್ಥಿಗಳ ರಕ್ಷಣೆ

Date:

spot_img

ಚಿಕ್ಕಮಗಳೂರು: ಟ್ರಕ್ಕಿಂಗ್ ಮಾಡಲು ಬಂದ 10 ಮೆಡಿಕಲ್ ವಿದ್ಯಾರ್ಥಿಗಳು ದಟ್ಟ ಕಾಡಿನಲ್ಲಿ ದಾರಿ ತಪ್ಪಿ ನಿತ್ರಾಣಗೊಂಡು, ಪೊಲೀಸರು ಮತ್ತು ಸ್ಥಳೀಯರ ಸಹಯೋಗದಿಂದ 2ಗಂಟೆ ರಾತ್ರಿಗೆ ಅವರನ್ನು ರಕ್ಷಿಸಿದ ಘಟನೆ ನಡೆದಿದೆ.

ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು ಮತ್ತು 5 ಹುಡುಗಿಯರು ಬಲ್ಲಾಳರಾಯನದುರ್ಗದಿಂದ ಟ್ರಕ್ಕಿಂಗ್ ಪ್ರಾರಂಭಿಸಿದ್ದರು. ಆದರೆ, ದಾರಿ ತಪ್ಪಿ ಅವರು ದಟ್ಟ ಕಾಡಿನಲ್ಲಿ ಸಿಕ್ಕಿಹಾಕಿಕೊಂಡರು. ದೀರ್ಘ ಸಮಯ ಅಲೆದಾಟದ ನಂತರ ಅವರು ದಣಿದು ನಿತ್ರಾಣಗೊಂಡಿದ್ದರು.

ವಿದ್ಯಾರ್ಥಿಗಳು ಕಾಡಿನಲ್ಲಿ ಕಳೆದುಹೋಗಿದ್ದಾರೆಂದು ತಿಳಿದು ಪೊಲೀಸರು , ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಸಂಜೆ 6 ಗಂಟೆಯಿಂದ ಹುಡುಕಾಟ ಆರಂಭಿಸಿದರು. ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ಮತ್ತು ಸ್ನೇಕ್ ರೆಸ್ಕ್ಯೂ ತಂಡದ ಆರಿಫ್ ಅವರ ನೇತೃತ್ವದಲ್ಲಿ ರಾತ್ರಿ 2ಗಂಟೆಗೆ ವಿದ್ಯಾರ್ಥಿಗಳನ್ನು ಕಾಡಿನಿಂದ ಸುರಕ್ಷಿತವಾಗಿ ಕರೆ ತರಲಾಯಿತು.

ರಕ್ಷಣೆ ನೀಡಿದ ಪೊಲೀಸರು ಮತ್ತು ಸ್ಥಳೀಯರಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸೂಚಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪಣಂಬೂರಿನ ವೀಳ್ಯದೆಲೆ: ಆರೋಗ್ಯ ಭಾಗ್ಯದ ಕಣಜ

ವೀಳ್ಯದೆಲೆ ಎಂದರೆ ಕೇವಲ ತಾಂಬೂಲವಲ್ಲ, ಇದು ಔಷಧೀಯ ಗುಣಗಳ ಕಣಜ

ಗೂಗಲ್‌ನಿಂದ ಕೃತಕ ಬುದ್ಧಿಮತ್ತೆ ಆಧಾರಿತ ‘ಜೀನಿ 3’ ಬಿಡುಗಡೆ

ಗೂಗಲ್ ಡೀಪ್‌ಮೈಂಡ್ ಸಂಸ್ಥೆಯು ತನ್ನ ಇತ್ತೀಚಿನ ಸಂವಾದಾತ್ಮಕ 3D AI ಮಾದರಿ ಜೀನಿ 3 ಅನ್ನು ಅನಾವರಣಗೊಳಿಸಿದೆ.

ಧರ್ಮಸ್ಥಳ ಪ್ರಕರಣ: ಸುಳ್ಳು ದೂರು ನೀಡಿದರೆ ಕಠಿಣ ಕ್ರಮ – ಗೃಹ ಸಚಿವ ಜಿ. ಪರಮೇಶ್ವರ

ಸಾಮೂಹಿಕ ಸಮಾಧಿ ಆರೋಪ ಸುಳ್ಳಾದರೆ ದೂರುದಾರರಿಗೆ ಕಠಿಣ ಶಿಕ್ಷೆ: ಪರಮೇಶ್ವರ